ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ಯಾವುದೇ ಕಾರಣಕ್ಕೂ ವಜಾ ಮಾಡಿಲ್ಲ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ಸರ್ಕಾರವೇ ನೇಮಿಸಿದ್ದು, ಅವರ ಕೆಲಸ ಮುಗಿದು ಹೋಗಿದೆ. ಈ ನಿಟ್ಟಿನಲ್ಲಿ ಸಮಿತಿಯನ್ನು ವಿಸರ್ಜನೆಗೊಳಿಸಿದಷ್ಟೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜನೆ ಮಾಡಿದ ನಂತರ ಹಲವಾರು ಮಾಧ್ಯಮಗಳಲ್ಲಿ ಸಾಹಿತಿಗಳು ಹಾಗೂ ಒಕ್ಕಲಿಗರ ಹೋರಾಟಕ್ಕೆ ಬೆದರಿದ ಬಿಜೆಪಿ ಸರ್ಕಾರ ಎಂಬ ಶೀರ್ಷಿಕೆಯನ್ನು ಹಾಕಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ ನಾವು ಯಾವುದೇ ಕಾರಣಕ್ಕೂ ಸಮಿತಿಯನ್ನು ವಜಾಗೊಳಿಸಿಲ್ಲ, ಸಮಿತಿ ಅಂತಿಮಗೊಳಿಸಿದ ಪಠ್ಯ ಪುಸ್ತಕವನ್ನೇ ಮಕ್ಕಳಿಗೆ ಹಂಚಿಯಾಗಿದೆ. ಸದ್ಯ ನಿಯಮದಂತೆ ಸಮಿತಿಯನ್ನು ವಿಸರ್ಜನೆಗೊಳಿಸಿದಷ್ಟೆ ಎಂದು ತಿಳಿಸಿದರು.
0 Comments