ಮೂಡುಬಿದಿರೆ : ಮೂಡುಬಿದಿರೆ ಶ್ರೀ ಧವಳ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಮಾದಕ ವಸ್ತು ವ್ಯಸನ ಹಾಗೂ ಹೆಲ್ಮೆಟ್ ಕಡ್ಡಾಯ ಕುರಿತು ಜಾಗೃತಿ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿರಂಜನ ಕುಮಾರ್ ಜಾಗೃತಿ ಮೂಡಿಸುವ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಮದ್ಯ ವ್ಯಸನಿಗಳಾಗಬಾರದು. ಡ್ರಗ್ಸ್, ತಂಬಾಕಿನ ಪದಾರ್ಥಗಳನ್ನು ಸೇವಿಸಬಾರದು, ನಿಮ್ಮದಲ್ಲದ ವಾಹನಗಳನ್ನು ಚಲಾಯಿಸಬಾರದು ಹಾಗೂ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನಗಳನ್ನು ಓಡಿಸಬಾರದು. ಈ ನಿಯಮಗಳನ್ನು ಪಾಲಿಸದೆ ಇದ್ದಾಗ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಮಹಾವೀರ ಅಜರ್ಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಪೊಲೀಸ್ ಉಪ ನಿರೀಕ್ಷಕ ಸುದೀಪ್ ಅವರು ಸಂಪ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸೈಬರ್ ಕ್ರೈಂ ನ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಮೊಬೈಲ್ ಬಳಕೆ ಉತ್ತಮ ಉದ್ದೇಶವನ್ನು ಹೊಂದಿರಬೇಕು. ವಿದ್ಯಾರ್ಥಿಗಳು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗ ಜಾಗೃತರಾಗಿರಿ. ಮೊಬೈಲ್ ಆಯಪ್ಗಳನ್ನು ಬಳಸುವಾಗ ಎಚ್ಚರವಿರಲಿ. ಅನಾಮಿಕ ಕರೆ ಮತ್ತು ಮೆಸೇಜುಗಳನ್ನು ನಿರ್ಲಕ್ಷಿಸುವಂತೆ ಸಲಹೆಗಳನ್ನು ನೀಡಿ.
ಪೊಲೀಸ್ ಉಪ ನಿರೀಕ್ಷಕ ಸಿದ್ದಪ್ಪ, ವಿದ್ಯಾರ್ಥಿ ನಾಯಕ ಸಂಪತ್, ಉಪನಾಯಕ ಜಿತೇಶ್
ವಿದ್ಯಾರ್ಥಿ ಸುಶಾಂತ್ ಸ್ವಾಗತಿಸಿ,ಕಾರ್ಯಕ್ರಮದ ಸಂಯೋಜಕಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಾಲಿಕಾ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ವಿದ್ಯಾರ್ಥಿನಿಯರಾದ ಶ್ರೇಯಾ ಮತ್ತು ವಿದ್ಯಾ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸವಿತಾ ದೀಪ.
0 Comments