ಉಪ್ಪಿನಂಗಡಿ ಪತ್ರಕರ್ತರ ಮೇಲಿನ ದೌರ್ಜನ್ಯ: ಸಮಗ್ರ ತನಿಖೆಗೆ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಪುತ್ತೂರು ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕುರಿತು ವರದಿಗಾರಿಕೆಗೆ ತೆರಳಿದ ಪತ್ರಕರ್ತರಾದ ಅಜಿತ್ ಕುಮಾರ್, ಸಿದ್ದಿಕ್ ನೀರಾಜೆ, ಪ್ರವೀಣ್ ಕುಮಾರ್ ಮೇಲೆ ವಿದ್ಯಾರ್ಥಿಗಲೆನಿಸಿಕೊಂಡ ಕೆಲವರು ಹಲ್ಲೆ ನಡೆಸಿ ದೌರ್ಜನ್ಯ ನಡೆಸಿರುವುದನ್ನು ಮೂಡುಬಿದಿರೆ ಪತ್ರಕರ್ತರ ಸಂಘ ಖಂಡಿಸಿದೆ. 

ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ದಕ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಯವರನ್ನು ಒತ್ತಾಯಿಸಿ ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕ ಸುದೀಪ್ ಮೂಲಕ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಅಶ್ರಫ್ ವಾಲ್ಪಾಡಿ, ಸದಸ್ಯರಾದ ನವೀನ್ ಸಾಲ್ಯಾನ್, ಹರೀಶ್ ಆದೂರು ಮನವಿ ಸಲ್ಲಿಸಿದರು.

Post a Comment

0 Comments