ಕಡಬ: ಕಡಬ ತಾಲೂಕಿನ ಕೋಡಿಂಬಾಳದ ಅಶ್ರಫ್ ಎಂಬವರ ಚಿಕ್ಕನ್ ಸೆಂಟರಿನಿಂದ ಅಸಲಿ ನೋಟನ್ನು ಹೋಲುವ ನೂರು ರೂಪಾಯಿಯ ಜೆರಾಕ್ಸ್ ನೋಟ್ ಒಂದು ಚಿಕ್ಕನ್ ಖರೀದಿಗೆ ಬಂದ
ಗ್ರಾಹಕಾರೋರ್ವರಿಗೆ ದೊರೆತಿದೆ. ಅವರು ಅದನ್ನು ಆಟೋ ಚಾಲಕ ರಾಜೇಶ್ ಎಂಬವರಿಗೆ ನೀಡಿದ್ದಾರೆ. ಈ ನೋಟು ಗಮನಿಸಿದ ಆಟೋ ಚಾಲಕ ರಾಜೇಶ್ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಡಬ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಚಿಕ್ಕನ್ ಅಂಗಡಿಗೆ ಬಂದು ಪರಿಶೀಲನೆ ನಡೆಸಿದರು.
ಚಿಕ್ಕನ್ ಖರೀದಿಗೆ ಬಂದ ಯಾರೋ ತನಗೆ ಈ ನೋಟ್ ನೀಡಿದ್ದಾಗಿಯೂ ಗಮನಿಸದೇ ಇನ್ನೊರ್ವರಿಗೆ ಚಲಾವಣೆ ಮಾಡಿದ್ದಾಗಿಯೂ ಚಿಕ್ಕನ್ ಅಂಗಡಿ ಮಾಲಕ ಅಶ್ರಫ್ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಸಾರ್ವಜನಿಕರು ಇಂತಹ ನೋಟ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.
0 Comments