ಮಂಗಳೂರು: ಕರಾವಳಿಯಲ್ಲಿ ತಣ್ಣಗಾಗಿದ್ದ ಹಿಜಾಬ್ ಕಿಚ್ಚನ್ನು ಮತ್ತೊಮ್ಮೆ ಆರಂಭಿಸಿರುವ ಮಂಗಳೂರಿನ ವಿಶ್ವ ವಿದ್ಯಾಲಯ ಕಾಲೇಜಿನ ವಿದ್ಯಾರ್ಥಿನಿಯರ ವಿರುದ್ಧ ಕಾಂಗ್ರೆಸ್ ಶಾಸಕ ಯು. ಟಿ ಖಾದರ್ ಕೆಂಡಮಂಡಲವಾಗಿದ್ದರೆ.
ಇತ್ತೀಚೆಗೆ ಹಿಜಾಬ್ ಹೋರಾಟಗಾರ್ತಿಯರಾದ ಕೆಲ ಹುಡುಗಿಯರು ಶಾಸಕ ಯು. ಟಿ ಖಾದರ್ ವಿರುದ್ಧ ಆರೋಪವನ್ನು ಹೊರಿಸಿದ್ದು, ನಮ್ಮ ಯಾವುದೇ ಕರೆಗಳಿಗೆ ಶಾಸಕರು ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನು ಹೊರಿಸಿದ್ದರು.
ಇದಕ್ಕೆ ಕೆಂಡಮಂಡಲರಾಗಿ ಪ್ರತಿಕ್ರಿಯಿಸಿದ ಮಾಜಿ ಶಾಸಕ ಯು. ಟಿ ಖಾದರ್ ಹಿಜಾಬ್ ಹೋರಾಟಗಾರ್ತಿಯರಿಗೆ ಬಿಸಿ ಮುಟ್ಚಿಸಿದ್ದಾರೆ.
ಈ ನೆಲದ ಕಾನೂನನ್ನು ಮೊದಲು ಗೌರವಿಸುವುದನ್ನು ಕಲಿಯಿರಿ, ನಂತರ ಉಳಿದ ಚಟುವಟಿಕೆಗಳನ್ನು ಮಾಡಿ ಈ ಕಾನೂನು ಹಿಜಾಬ್ ಧರಿಸದಂತೆ ಆದೇಶವನ್ನು ಹೊರಡಿಸಿದ್ದು, ಕಾನೂನನ್ನು ಪಾಲಿಸಿ ಎಂದ ಅವರು ಇಲ್ಲಿ ಜಿಲ್ಲಾಧಿಕಾರಿ, ಪ್ರಾಂಶುಪಾಲರು, ಅಥವಾ ಕುಲಪತಿ ಗಳ ಬಳಿ ತಮ್ಮ ಮನವಿಯನ್ನು ಸಲ್ಲಿಸುತ್ತಿರಿ, ಆದರೆ ನೀವೊಮ್ಮೆ ಸೌದಿ ಅಥವಾ ಪಾಕಿಸ್ತಾನಕ್ಕೆ ಹೋಗಿ ಬನ್ನಿ ಅಲ್ಲಿ ಯಾವ ರೀತಿ ಕಾನೂನು ಇದೆ ಎಂಬುದು ನಿಮಗೆ ಅರಿವಾಗುತ್ತದೆ ಎಂದರು. ಇಲ್ಲಿನ ಕಾನೂನೇ ಬೇರೆ ಅಲ್ಲಿನ ಕಾನೂನೇ ಬೇರೆ ಈ ದೇಶ ಎಲ್ಲಾರಿಗೂ ಸ್ವಾತಂತ್ರ್ಯವನ್ನು ನೀಡಿದೆ. ಮುಕ್ತವಾಗಿ ಚರ್ಚಿಸಲು ಅವಕಾಶವನ್ನು ನೀಡಿದೆ. ಹೀಗಾಗಿ ಇಂದು ನೀವು ಎಲ್ಲಾರ ವಿರುದ್ಧ ಆರೋಪವನ್ನು ಮಾಡುತ್ತಿರಿ ಹಾಗೂ ಎಲ್ಲರಿಗೂ ಮನವಿಯನ್ನು ನೀಡುತ್ತಿರಿ, ಇದು ಈ ದೇಶ ನಿಮಗೆ ನೀಡಿದಂತಹ ಸ್ವಾತಂತ್ರ್ಯ ಅದನ್ನು ಮೊದಲು ಗೌರವಿಸಲು ಕಲಿಯಿರಿ ಎಂದು ಶಾಸಕ ಯು. ಟಿ ಖಾದರ್ ಎಚ್ಚರಿಸಿದ್ದಾರೆ.
0 Comments