ಯುವಶಕ್ತಿ ಮತ್ತು ಮಾತೃಶಕ್ತಿ ಧರ್ಮದ ರಕ್ಷಣೆಯಲ್ಲಿ ತೊಡಗಿದರೆ ಕೆಲಸ ಸುಸೂತ್ರ - ಗುರುದೇವಾನಂದ ಸ್ವಾಮೀಜಿ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಆತ್ಮ ವಿಶ್ವಾಸವನ್ನು ವೃದ್ಧಿಸುತ್ತದೆ. ನಮ್ಮ ದೇಶದ ಮೌಲ್ಯ ಅಧ್ಯಾತ್ಮಿಕತೆಯಲ್ಲಿದ್ದು ಅದು ನಮ್ಮಲ್ಲಿ ಜಾಗೃತಿಯಾಗಬೇಕಾಗಿದೆ. ಯುವಶಕ್ತಿ ಮತ್ತು ಮಾತೃಶಕ್ತಿ ಧರ್ಮದ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಕೊಂಡಾಗ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಅವರು  ಶಿರ್ತಾಡಿ- ವಾಲ್ಪಾಡಿಯ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅರ್ಜುನಾಪುರದಲ್ಲಿ ಬುಧವಾರ ನಡೆದ ನೂತನ ಗರ್ಭಗೃಹ ನಿರ್ಮಾಣದ ಪಾದುಕಾನ್ಯಾಸದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. 

ಕಾಲುಗಳು ಸರಿಯಾಗಿ ಗಟ್ಟಿಯಾಗಿ ನಿಲ್ಲಲು ಪಾದುಕ ಬೇಕು. ಅದೇ ರೀತಿ ಇದೀಗ ದೇವಸ್ಥಾನ ಸ್ಥಿರವಾಗಿ ನಿಲ್ಲಲು ಪಾದುಕಾನ್ಯಾಸದ ಮೂಲಕ ಮೊದಲ ಹೆಜ್ಜೆ ಆರಂಭಗೊಂಡಿದ್ದು ಮುಂದಿನ ಕೆಲಸಗಳು ಯಶಸ್ವಿಯಾಗಿ ನಡೆಯುತ್ತವೆ ಎಂದ ಅವರು ಭಾವನಾತ್ಮಕ ಸಂಬಂಧಗಳು ಗಟ್ಟಿಯಾದರೆ ಭಕ್ತಿ ಪರಿಶುದ್ಧವಾಗಲು ಸಾಧ್ಯ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅಧ್ಯಕ್ಷತೆಯನ್ನು  ವಹಿಸಿ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.  

 ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ರಾಜ್ಯ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಶಿಮುಂಜೆಗುತ್ತು ಶಿರ್ತಾಡಿಯ ಎಸ್.ಡಿ.ಎಂ ಸಂಪತ್ ಸಾಮ್ರಾಜ್ಯ, ಶಿರ್ತಾಡಿ ಗ್ರಾ.ಪಂ ಅಧ್ಯಕ್ಷ ಸಂತೋಷ್ ಕೋಟ್ಯಾನ್, ವಾಲ್ಪಾಡಿ ಗ್ರಾ.ಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಉದ್ಯಮಿ ಮನೋಜ್ ಸರಿಪಲ್ಲ, ಕಲ್ಲುಕೋರೆ ಗಣಿ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ , ಕಿನ್ನಿಗೋಳಿ ವಿವೇಕಾನಂದ ಸೇವಾ ಟ್ರಸ್ಟ್ನ ಜಗನ್ನಾಥ್ ಶೆಟ್ಟಿ ಚಾವಡಿಮನೆ, ಪುಣೆ ಉದ್ಯಮಿ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಸೇವಾ ಸಮಿತಿ ಅಧ್ಯಕ್ಷ ಬಲರಾಮ್ ಪ್ರಸಾದ್ ಉಪಸ್ಥಿತರಿದ್ದರು. 

 ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ನಾರಾಯಣ ಶೆಟ್ಟಿ ಪ್ರಾಸ್ತಾವಿಕ ಮಾತಗಳನ್ನಾಡಿದರು. 

ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿ,ಮಾಧ್ಯಮ ಪ್ರತಿನಿಧಿ ನವೀನ್ ಸಾಲ್ಯಾನ್ ಸ್ವಾಗತಿಸಿದರು.  ಸುದೀಪ್ ಬುನ್ನನ್ ವಂದಿಸಿದರು.

Post a Comment

0 Comments