ಮೂಡುಬಿದಿರೆ : ಕ್ಯಾನ್ಸರ್ ಪೀಡಿತರಿಗೆ ಪುಟ್ಟ ಬಾಲೆಯೋರ್ವಳು ಕೇಶ ದಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದು ಅಸಂಖ್ಯಾತ ಜನರಿಗೆ ಮಾದರಿಯಾಗಿದ್ದಾಳೆ.
ಹ್ಯುಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಅವರು ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡುವ ಮಹಾಯೋಜನೆಯನ್ನು ರೂಪಿಸಿದ್ದು ಇದಕ್ಕೆ ಪಡುಮಾರ್ನಾಡಿನ ಸೇವಾ ಮಾಣಿಕ್ಯವೆಂದು ಬಿರುದು ಪಡೆದಿರುವ ಲೋಹಿತ್ ಎಸ್-ಟೆಸ್ಲಿನಾ ದಂಪತಿಯ 6 ವರ್ಷದ ಎಸ್ ಪುತ್ರಿ ತಾನಿಯ. ತನ್ನ ೧೨ ಇಂಚಿನಷ್ಟು ಉದ್ದದ ವಯಸ್ಸನ್ನು ದಾನ ಮಾಡಲು ಮುಂದೆ ಬರುವ ಮೂಲಕ ಮೀರಿದ ಯೋಚನೆಯನ್ನು ಮಾಡಿದ್ದಾಳೆ.
ಈ ಕುರಿತು ಸಂತಸ ವ್ಯಕ್ತಪಡಿಸಿದ ತಾನಿಯಾಳ ತಾಯಿ ಟೆಸ್ಲಿನಾ, ನನ್ನ ಸಹೋದರಿ, ತಾನಿಯಾಳ ಚಿಕ್ಕಮ್ಮ ಕ್ಯಾರಲ್ ಇತ್ತೀಚೆಗೆ ಕ್ಯಾನ್ಸರ್ ಪೀತರಿಗೆ ನೀಡಲು ದಾನ ಮಾಡಿದ್ದು ಈ ಬಗ್ಗೆ ತಾನಿಯಾ ಆಕೆಯ ಬಳಿ ವಿಚಾರಿಸಿದ್ದಾಳೆ ಆಕೆ ಕ್ಯಾನ್ಸರ್ ಪೀಡಿತರ ಬಗ್ಗೆ ತಿಳಿಸಿದ್ದಾಳೆ. ಆಗ ತಾನೂ ತನ್ನ ದಾನ ಮಾಡುವುದಾಗಿ ತಿಳಿಸಿದ್ದಳು. ಆಕೆಗೆ ಪ್ರೋತ್ಸಾಹ ನೀಡುವ ನಾವೂ ಸಹ ಸಮ್ಮತಿ ನೀಡಿದ್ದೇವೆ. ತಾನಿಯಾ ಒಂದೂವರೆ ವರ್ಷದ ಮಗುವಿದ್ದಾಗ ಕತ್ತರಿಸಿದ್ದೆವು. ಆಕೆಯ ತಂದೆಗೆ ಮಗಳು ಕೂಡಲೆಂದರೆ ಇಷ್ಟಕ್ಕಾಗಿ ನಂತರ ಕತ್ತರಿಸಲಿಲ್ಲ. ಈಗ ೧೨ ಇಂಚಿನಷ್ಟು ಉದ್ದದ ಕೂದಲು ಬೆಳೆದಿದ್ದು ಅದರಲ್ಲಿ ಸ್ವಲ್ಪ ಉಳಿಸಿ ದಾನ ಮಾಡಿದ್ದಾಳೆ. ತಮ್ಮ ಮಗಳು ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡುವುದರ ಬಗ್ಗೆ ತಮಗೆ ಹೆಮ್ಮೆಯಿದೆ.
0 Comments