ನವದೆಹಲಿ: ವಾಣಿಜ್ಯ ಹಾಗೂ ಗೃಹಬಳಕೆ ಎಲ್‌ಪಿಜಿ ಸಿಲೆಂಡರ್‌ಗಳ ಬೆಲೆ ಮತ್ತೆ ಏರಿಕೆ ಕಂಡಿದೆ. ವಾಣಿಜ್ಯ ಸಿಲೆಂಡರ್ ಬೆಲೆ 8 ರೂ. ಹಾಗೂ ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆ 3.50 ರೂ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕಂಡ ಹಿನ್ನಲೆ ಭಾರತ ಸರ್ಕಾರ ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ.
ಇವೆರಡು ಗ್ಯಾಸ್ ಸಿಲೆಂಡರ್‌ಗಳ ಬೆಲೆ ಏರಿಕೆ ಕಂಡ ಬಳಿಕ ದೇಶಾದ್ಯಂತ ಎಲ್ಲಾ ನಗರಗಳಲ್ಲಿ ಸಿಲೆಂಡರ್ ಬೆಲೆ 1000 ರೂ. ಗಡಿ ದಾಟಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಗೃಹಬಳಕೆ ಸಿಲೆಂಡರ್ ಬೆಲೆ 1006ರೂ., ದೆಹಲಿ ಮತ್ತು ಮುಂಬೈನಲ್ಲಿ 1003ರೂ., ಕೊಲ್ಕತ್ತಾದಲ್ಲಿ 1029ರೂ., ಚೆನ್ನೈನಲ್ಲಿ 1058ರೂ.ಗೆ ಮಾರಾಟವಾಗುತ್ತಿದೆ.
ಈ ಹಿಂದೆ ಮೇ 7ರಂದು 50 ರೂ. ಏರಿಕೆ ಕಂಡಿದ್ದ ಎಲ್‌ಪಿಜಿ ಸಿಲೆಂಡರ್ ಬೆಲೆ ಇದೀಗ ಮತ್ತೆ ಏರಿಕೆ ಕಂಡಿದ್ದು, ಒಂದು ವರ್ಷದ ಅವಧಿಯಲ್ಲಿ ಸುಮಾರು 200ರೂ. ಗಳಷ್ಟು ಏರಿಕೆಯಾಗಿದೆ.
0 Comments