ಮೂಡುಬಿದಿರೆ ಸಿಐಟಿಯುನಿಂದ ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಣೆ ಭಾರತದಲ್ಲಿ ಜೀತದಾಳು ಪದ್ಧತಿ ಜೀವಾಂತ: ಸುನಿಲ್ ಕುಮಾರ್ ಬಜಾಲ್

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ : ನಾವು ಸ್ವಾತಂತ್ರ್ಯ ಪಡೆದು ೭೫ ವರ್ಷಗಳ ಹಾದಿಯಲ್ಲಿದ್ದೇವೆ. ಕಾರ್ಮಿಕರ ದಿನವನ್ನು ಆಚರಿಸುತ್ತಾ ಶತಮಾನದತ್ತ ಕಾಲಿಡುತ್ತಿದ್ದೇವೆ ಆದರೆ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸುವ ಪದ್ಧತಿ ಭಾರತದಲ್ಲಿ ಇನ್ನೂ ಜೀವಾಂತವಾಗಿದೆ ಎಂದು ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ವಿಷಾಧ ವ್ಯಕ್ತಪಡಿಸಿದರು.

  ಅವರು ಅಂತರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ಸಿ.ಐ.ಟಿ.ಯು ಮೂಡುಬಿದಿರೆ ವಲಯ ಸಮಿತಿಯ ವತಿಯಿಂದ ಸಮಾಜ ಮಂದಿರದಲ್ಲಿ ಭಾನುವಾರ ನಡೆದ "ಮೇ ಡೇ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಲವಾರು ವರ್ಷಗಳ ಹಿಂದೆ ಕಾರ್ಮಿಕರನ್ನು ೧೬ ಗಂಟೆಗಳ ಕಾಲ ದುಡಿಸಿಕೊಳ್ಳುವಂತಹ ಪದ್ಧತಿ ಇತ್ತು. ನಂತರ ದಿನಗಳಲ್ಲಿ ಹೋರಾಟ ಮಾಡಿದ್ದರಿಂದ ಅದನ್ನು ೧೪ ಗಂಟೆ, ೧೨ ಗಂಟೆಗಳಿಗೆ ಮತ್ತು  ೧೦ ಗಂಟೆಗಳ ಕಾಲಕ್ಕೆ ಸೀಮಿತಗೊಳಿಸಲಾಯಿತು. ಇದೀಗ ಕಾರ್ಮಿಕರಿಗೆ ೮ ಗಂಟೆಗಳ ಕಾಲ ನಿದ್ದೆ, ೮ ಗಂಟೆಗಳ ಕಾಲ ಮೋಜು ಹಾಗೂ ೮ ಗಂಟೆಗಳ ಸಮಯ ದುಡಿಮೆಗಾಗಿ ಮೀಸಲಿರಿಸಲು ಹೋರಾಟ ನಡೆಸಲಾಗುತ್ತಿದೆ. ಆದರೆ ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಕಾರ್ಮಿಕರ ಹೋರಾಟವನ್ನು ಧಮನಗೊಳಿಸಿ ಸರ್ವಾಧಿಕಾರದ ಧೋರಣೆ ನಡೆಯುತ್ತಿದೆ. ಕಾರ್ಮಿಕರಿಗಿರುವ ಹಕ್ಕುಗಳ ಬಗ್ಗೆ ಕಾನೂನಿನಲ್ಲಿ ಮಾತ್ರ ಇದ್ದು ಅದನ್ನು ಕಾರ್ಯಗತಗೊಳಿಸದಂತೆ ತಡೆ ಹಿಡಿಯಲಾಗುತ್ತಿದೆ ಇದು ಅಪಾಯಕಾರಿ ಸನ್ನಿವೇಶ ಎಂದರು. 

  ನಮ್ಮ ಜಿಲ್ಲೆಯ ಕಾರ್ಮಿಕರಿಗೆ ಸರಿಯಾದ ವೇತನ ನೀಡದೆ ಉತ್ತರ ಭಾರತದಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು ಅವರಿಗೆ ಸರಿಯಾದ ಸವಲತ್ತುಗಳನ್ನು ನೀಡದರೆ ಕಡಿಮೆ ಸಂಬಳಕ್ಕೆ ಜೀತದಾಳುಗಳಂತೆ ದುಡಿಸಲಾಗುತ್ತಿದೆ ಎಂದು ಬಜಾಲ್ ಆರೋಪಿಸಿದರು.

  ಸಿ.ಐ.ಟಿ.ಯು. ಮೂಡುಬಿದಿರೆ ವಲಯ ಸಮಿತಿಯ ಅಧ್ಯಕ್ಷೆ ರಮಣಿ ಅಧ್ಯಕ್ಷತೆ ವಹಿಸಿದ್ದರು. ಸಿ.ಐ.ಟಿ.ಯು.ವನ ಮುಖಂಡರಾದ ಗಿರಿಜಾ, ಲಕ್ಷಿö್ಮÃ, ಶಂಕರ ವಾಲ್ಪಾಡಿ, ಸುಂದರ ಶೆಟ್ಟಿ, ದಿವಾಕರ ಸುವರ್ಣ ನಿಡ್ಡೋಡಿ, ರಿಕ್ಷಾ ಯೂನಿಯನ್‌ನ ಉಮಾಧ್ಯಕ್ಷ ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಧಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

  ಇದಕ್ಕೂ ಮೊದಲು ಸಿ.ಐ.ಟಿ.ಯು. ಕಛೇರಿಯಿಂದ ಮೂಡುಬಿದಿರೆ ಸಮಾಜ ಮಂದಿರದವರೆಗೆ ಮೆರವಣಿಗೆ ನಡೆಯಿತು.

Post a Comment

0 Comments