ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘ (ರಿ.) ಮೂಡುಬಿದಿರೆ ಇದರ ಹತ್ತನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ಭಾನುವಾರ ನಡೆದಿದ್ದು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ೧೦ ಮಂದಿ ಸಾಧಕರನ್ನು ಮತ್ತು ೧೦ ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಬಾರ್ಕೂರು ಭಂಡಾರಿ ಮಹಾ ಮಂಡಲ(ರಿ.)ಇದರ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ ಭಂಡಾರಿ ಸಮಾಜದವರು ಎಲ್ಲಾ ವರ್ಗದ ಜನರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವವರು ಅಲ್ಲದೆ ಪ್ರತಿಯೊಬ್ಬರು ಕೂಡಾ ಭಂಡಾರಿಯವರು ಹೇಳಿದ ಮಾತನ್ನು ಕೇಳುತ್ತಾರೆ ಇದು ತಮಗೆ ಸಂತೋಷದ ವಿಷಯ. ಭಂಡಾರಿ ಸಮಾಜದ ಸಂಘಕ್ಕೆ ನಿವೇಶನದ ಅವಶ್ಯಕತೆಯಿದ್ದು ಆದಷ್ಟು ಬೇಗ ನಿವೇಶನವನ್ನು ಗುರುತಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜಾತಿ ಸಂಘಟನೆಗಳು ವಿವಿಧ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಇತರ ಸಮುದಾಯಗಳಿಗೆ ಪೈಪೋಟಿಯನ್ನು ನೀಡಬೇಕಾಗಿದೆ. ಅದರಂತೆ ಭಂಡಾರಿ ಸಮಾಜವು ವಿಭಿನ್ನವಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಇತರ ಜಾತಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಸಹಾಯ ಧನ ವಿತರಣೆ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ, ದಿ/ಜಯ ಭಂಡಾರಿ ಅವರ ಸ್ಮರಣಾರ್ಥ ಅವರ ಪತ್ನಿ ವಸಂತಿ ಜೆ.ಭಂಡಾರಿ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ೯ನೇ ವರ್ಷದ ಪುಸ್ತಕ ವಿತರಣೆ ನಡೆಯಿತು.
ಮೂಡುಬಿದಿರೆ ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಎನ್.ಪ್ರಕಾಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಉದ್ಯಮಿ ದಿವಾಕರ ಶೆಟ್ಟಿ ತೋಡಾರು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀಧರ ಭಂಡಾರಿ ಬಿರ್ತಿ, ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಕುಳಾಯಿ, ಡಾ.ರಾಧಿಕಾ ಸಿ., ಡಾ.ಮಹಿಮಾ ಸಾಗರ್ ಭಂಡಾರಿ, ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷರುಗಳಾದ ಶೇಖರ ಭಂಡಾರಿ (ಕಾರ್ಕಳ),ಉಮೇಶ್ ಭಂಡಾರಿ (ಬೆಳ್ತಂಗಡಿ), ಗಿರೀಶ್ ಭಂಡಾರಿ (ಪುತ್ತೂರು) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೂಡುಬಿದಿರೆ ಸಂಘದ ಗೌರವ ಅಧ್ಯಕ್ಷರುಗಳಾದ ಶಾಂತಾ ಕೆ.ಭಂಡಾರಿ, ಸುಮಿತ್ರ ಭಂಡಾರಿ ಕಾನ, ವಸಂತಿ ಜೆ.ಭಂಡಾರಿ ಉಪಸ್ಥಿತರಿದ್ದರು.
ಪ್ರಖ್ಯಾತ್ ಭಂಡಾರಿ ಕೆಸರ್‌ಗದ್ದೆ ಸ್ವಾಗತಿಸಿದರು. ಸತೀಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
0 Comments