ಇರುವೈಲು ಗ್ರಾ.ಪಂ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ; ಇರುವೈಲು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಇಲ್ಲಿನ ಅಧ್ಯಕ್ಷರು, ಸದಸ್ಯರು ಸೇರಿದಂತೆ ಎಲ್ಲಾ ಜನರು ಬಹಳಷ್ಟು ಒದ್ದಾಟ ನಡೆಸಿ ಕೊನೆಗೂ ರಸ್ತೆ ಬದಿಯಲ್ಲೇ ಸ್ಥಳ ದೊರಕಿದ್ದು, ಈಗಾಗಲೇ ಕಟ್ಟಡ ನೀಲಿ ನಕ್ಷೆ ತಯಾರಿದ್ದು ಕಟ್ಟಡ ನಿರ್ಮಾಣಕ್ಕೆ   ೧೦ ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನರೇಗಾ, ಸಿ.ಆರ್.ಎಸ್ ಫಂಡ್‌ನಿAದ ಅನುದಾನವನ್ನು ಬಿಡುಗಡೆ ಮಾಡಿ ಆದಷ್ಟು ಬೇಗ ಸುಸಜ್ಜಿತವಾದ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್ ಸದಸ್ಯರು, ಹಾಗೂ ಎಲ್ಲಾ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಶಾಸಕ ಉಮಾನಾಥ್ ಕೋಟ್ಯಾನ್ ತಿಳಿಸಿದರು.

 ಅವರು ಸೋಮವಾರ ಇರುವೈಲು ಗ್ರಾ.ಪಂಚಾಯತ್‌ನ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ  ನೇರವೇರಿಸಿ ಮಾತನಾಡಿದರು.

ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹ್ ಮಾತನಾಡಿ ಇರುವೈಲು ಪಂಚಾಯತ್ ಕಟ್ಟಡ ನಿರ್ಮಾಣಕ್ಕಾಗಿ ಹಲವೆಡೆ ಸ್ಥಳ ನಿಗದಿಗಾಗಿ ಅಲೆದಾಡಿ ಕೊನೆಗೂ ೫ ಸೆಂಟ್ಸ್ ಜಾಗವು ಸಿಕ್ಕಿದ್ದು ಸಂತೋಷ ತಂದಿದೆ. ಈಗಿರುವ ಪಂಚಾಯತ್ ಕಟ್ಟಡವು ತುಂಬಾ ಒಳದಾರಿಯಲ್ಲಿದ್ದು ಆ ಪ್ರದೇಶದಲ್ಲಿ ಬಸ್ಸುಗಳೆಲ್ಲ ಓಡಾಡದೇ ಜನರು ಅಲೆದಾಡಬೇಕಿತ್ತು. ಆದರೆ ಇದೀಗ ಕಟ್ಟಡ ನಿರ್ಮಾಣಕ್ಕೆ ಜಾಗ ದೊರಕಿದ್ದು, ಪಂಚಾಯತ್ ನಿರ್ಮಾಣಕ್ಕೆ ೧೦ ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಕಟ್ಟಡ ನಿರ್ಮಾಣಕ್ಕೆ ೬೦ ಲಕ್ಷ ವೆಚ್ಚ ತಗಲಬಹುದೆಂದು ಅಂದಾಜಿಸಿದ್ದು  ಶಾಸಕರು ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.

 ಈ ಸಂದರ್ಭದಲ್ಲಿ ವಕೀಲ ಶಾಂತಿಪ್ರಸಾದ್ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ, ಇರುವೈಲು ವಲಯ ಸಿ.ಎಚ್.ಓ ಲೆನಿಟಾ ಡಿಸೋಜಾ, ಇಂಜಿನಿಯರ್ ಜಗದೀಪ್ ಸೆಟ್, ಇರುವೈಲು ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ, ಇರುವೈಲು ಹಾಗೂ ತೋಡಾರು ಪಂಚಾಯತ್ ಸದಸ್ಯರುಗಳಾದ ದಿನೇಶ್ ಅಮೀನ್, ನವೀನ್ ಪೂಜಾರಿ, ಮೋಹಿನಿ, ರುಕ್ಮಿಣಿ, ಜಯಶಂಕರ್ ಆರ್ ಸಪಲ್ಯ, ಉಷಾ ಆರ್ ಶೆಟ್ಟಿ, ಕುಸುಮ, ಲಲಿತ ಮುಗೇರ, ಮೊಹಿನಿ, ಎಮ್.ಎ.ಅಶ್ರಫ್ ಹಾಗೂ ಮಾಜಿ ಸದಸ್ಯರುಗಳಾದ  ಅಶೋಕ್ ಕುಮಾರ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments