ಗಡುವು ನೀಡಿದ್ದರೂ ಮಸೀದಿಗಳಲ್ಲಿನ ಮೈಕ್ ತೆರವುಗೊಳಿಸದ ರಾಜ್ಯ ಸರ್ಕಾರದ ಕ್ರಮಕ್ಕೆ ಎಚ್ಚರಿಕೆಗೆ ಕಿವಿಗೊಡದ ಮುಸ್ಲಿಮರು ಮಸೀದಿಗಳಲ್ಲಿ ಮೈಕ್ ತೆರಹುಗೊಳಿಸುತ್ತಿಲ್ಲ. ಸರ್ಕಾರ ಮಸೀದಿಗಳಿಗೆ ನೋಟೀಸ್ ಕೊಟ್ಟು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಹೊರಟಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಮೇ9ರಂದು ರಾಜ್ಯಾದ್ಯಂತ ಎಲ್ಲಾ ದೇವಾಲಯಗಳ ಮೇಲೆ ಮುಂಜಾನೆ 5 ಗಂಟೆಗೆ ಓಂ ನಮ: ಶಿವಾಯ, ರಾಮ ಜಪ, ಹನುಮಾನ್ ಚಾಲೀಸ ಮಂತ್ರಘೋಷಣೆಗಳನ್ನು ಹಾಕಲು ನಿರ್ಧರಿಸಿದ್ದೇವೆ. ನಮ್ಮನ್ನು ಸರ್ಕಾರ ತಡೆಯಲು ಮುಂದಾದರೆ ಸಂಘರ್ಷ ನಡೆಯುತ್ತದೆ. ಅದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತೆ ಎಂದು ಎಚ್ಚರಿಸಿದ್ದಾರೆ.
ರಾತ್ರಿ ಹತ್ತರಿಂದ ಬೆಳಿಗ್ಗೆ 6 ಗಂಟೆಯವರೆಗೂ ಸಾರ್ವಜನಿಕವಾಗಿ ಮೈಕ್ ಬಳಸುವಂತಿಲ್ಲ ಆಸ್ಪತ್ರೆ, ಶಾಲೆ, ಕಾಲೇಜು, ಜನವಸತಿ ಪ್ರದೇಶಗಳಲ್ಲಿ ಮೈಕ್ ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ ಆದರೂ ಕ್ಯಾರೇ ಎನ್ನುತ್ತಿಲ್ಲ. ಮುಂಜಾನೆ 5 ಗಂಟೆಯಿಂದ ಆಜಾನ್ ಮೊಳಗುತ್ತಿದೆ. ಮೇ 1ರೊಳಗೆ ಮೈಕ್ ತೆರವುಗೊಳಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೂ ಕ್ರಮ ಕೈಗೊಂಡಿಲ್ಲ. ನಮ್ಮ ಎಚ್ಚರಿಕೆ ಲಘುವಾಗಿ ಪರಿಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
.
0 Comments