ಮೂಡುಬಿದಿರೆ : 1200 ವರ್ಷಗಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ, ತುಳುನಾಡಿನ ಅರಸ ಮನೆತನಗಳ ಅಧೀನದಲ್ಲಿದ್ದು ಇಲ್ಲಿನ ಚಾಮುಂಡಿಬೆಟ್ಟದಲ್ಲಿ ದೈವ ದೇವರುಗಳಾಗಿ ನೆಲೆ ನಿಂತು ಕಳೆದ 40 ವರ್ಷಗಳ ಹಿಂದೆ ವಿಜೃಂಭಣೆಯಿಂದ ಜಾತ್ರೆ, ವಿವಿಧ ದೈವಗಳು ಕೋಲವನ್ನು ಪಡೆದು ಮೆರೆಯುತ್ತಿದ್ದ ನಂತರ ಶಿಥಿಲಾವಸ್ಥೆಗೆ ಜಾರಿದ್ದ " ಶ್ರೀ ಕ್ಷೇತ್ರ ಅಂಗಸಾಲೆ"ಯಲ್ಲಿ ಚಾಮುಂಡಿಬೆಟ್ಟ ಟ್ರಸ್ಟ್ ವತಿಯಿಂದ ಕೇರಳದ ಪಯ್ಯನೂರು ಗೋಪಾಲಕೃಷ್ಣ ಪಣ್ಣಿಕ್ಕರ್ ಅವರಿಂದ ಮೇ.8ರಂದು ಅಷ್ಟಮಂಗಳ ಪ್ರಶ್ನೆ ಜರಗಲಿದೆ ಎಂದು ಶ್ರೀ ಕ್ಷೇತ್ರ ಅಂಗಸಾಲೆ ಚಾಮುಂಡಿಬೆಟ್ಟ ಟ್ರಸ್ಟ್ ನ ಅಧ್ಯಕ್ಷ ಕೆ.ಶ್ಯಾಮ್ ಹೆಗ್ಗೆ ತಿಳಿಸಿದರು.
ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು.
0 Comments