ಮೇ 7,8 ಆರ್ಡಿ ಕೆರ್ಜಾಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಬ್ರಹ್ಮಕಲಶಾಭಿಷೇಕ, ವಾರ್ಷಿಕ ವರ್ಧಂತಿ ಮಹೋತ್ಸವ


ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಆರ್ಡಿ ಕೆರ್ಜಾಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರೀ ಸಪರಿವಾರ ದೇವಸ್ಥಾನದ ಬ್ರಹ್ಮಕಲಶಾಭಿಷೇಕ, ವಾರ್ಷಿಕ ವರ್ಧಂತಿ ಮಹೋತ್ಸವ ಮೇ7 ಮತ್ತು 8 ರಂದು ಸಂಭ್ರಮದಿಂದ ನಡೆಯಲಿದೆ.

ಸೌಕೂರು ವೇದಮೂರ್ತಿ ಶ್ರೀ ಚಂದ್ರಶೇಖರ ಅಡಿಗ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ

ಮೇ 7 ರಂದು ಬೆಳಿಗ್ಗೆ ಫಲನ್ಯಾಸ, ಗುರು ಗಣಪತಿ ಪೂಜೆ, ಪುಣ್ಯಾಹ, ಗಣಯಾಗ, ನವಗ್ರಹ ಪೂಜೆ, ಸಪರಿವಾರ ಪೂಜೆ ಹಾಗೂ

ಸಂಜೆ ಗುರು ಗಣಪತಿ ಪೂಜೆ, ಪುಣ್ಯಾಹ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಪೂಜಾ ಬಲಿ, ಅಷ್ಟೋತ್ತರ ಶತ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ ಇತ್ಯಾದಿ ನಡೆಯಲಿದೆ.

ಮೇ 8 ರಂದು ಬೆಳಗ್ಗೆ ಸಪ್ನಧಿವಾಸ ಹೋಮ, ಕಲಶಾಭಿಷೇಕ, 10ಕ್ಕೆ ಹಣ್ಣುಕಾಯಿ, ಹರಿವಾಣ ನೈವೇದ್ಯ, ತುಲಾಭಾರ ಸೇವೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಸಂಜೆ ರಂಗಪೂಜೆ ಸಹಿತ ಸಪರಿವಾರ ಪೂಜೆ, ಸಂದರ್ಶನ, ಸುತ್ತು ಹಾಸ್ಯ, ರಾತ್ರಿ ಕುಂದ ಕನ್ನಡದಲ್ಲಿ ಮಾಂತ್ರಿಕ ಮನು ಸಭಾಂಗಣದಲ್ಲಿ ಹಾಸ್ಯ, ಸಂಜೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾ ವಿದ್ಯಾಲಯಗಳು ಹಾಗೂ ಆಸ್ಪತ್ರೆಯ ಪ್ರಾಚಾರ್ಯ ಮತ್ತು ಮುಖ್ಯವೈದ್ಯ ಡಾ. ಪ್ರಶಾಂತ ಶೆಟ್ಟಿ ಉಪಸ್ಥಿತರಿರಲಿದ್ದಾರೆ. 

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ಪ್ರೇಮಾನಂದ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ, ಕೆರ್ಜಾಡಿ ಶ್ರೀ ಶ್ರೀ ದೇವಾಪರಮೇಶ್ವರಿ ಸಪರಿವಾರ ದೇವಸ್ಥಾನದ ಗೌರವಾಧ್ಯಕ್ಷ ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.   

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ರಂಗ ಪಾಣರ ಅವರಿಗೆ ಸನ್ಮಾನ ಕಾರ್ಯಕ್ರಮ. 

ನಂತರ ಕಲ್ಲುಕುಟಿಗ ಸಿರಿ ಸಿಂಗಾರ ಕೋಲ ಸೇವೆಯು ಉತ್ತಮ.

Post a Comment

0 Comments