ಮೂಡುಬಿದಿರೆ: ವ್ಯಾಪ್ತಿಯ ವಿದ್ಯಾಗಿರಿ ಮಾಸ್ತಿಕಟ್ಟೆ ಪೇಪರ್ ಮಿಲ್ ರಿಂಗ್ ರಸ್ತೆ ಅಭಿವೃದ್ಧಿಗೆ 6ಕೋಟಿ ವೆಚ್ಚದಲ್ಲಿ ನಡೆದ ಗುದ್ದಲಿ ಪೂಜೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಭಾನುವಾರದಂದು ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಚೌಟರ ಅರಮನೆಯ ಕುಲದೀಪ್ ಎಂ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಮಂಡಲ ಅಧ್ಯಕ್ಷ ಸುನೀಲ್ ಆಳ್ವಾ, ಪುರಸಭಾ ಉಪಾಧ್ಯಕ್ಷೆ ಸುಜಾತಾ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಎಲ್ಲಾ ಗೌರವಾನ್ವಿತ ಪುರಸಭಾ ಸದಸ್ಯರು, ಹಾಗೂ ಪ್ರಮುಖರಾದ ಕೃಷ್ಣರಾಜ ಹೆಗಡೆ, ಎಂಎಸ್ ಕೋಟ್ಯಾನ್, ನಾರಾಯಣ್ ಪಿ. ಎಂ, ಡಾ.ಹರೀಶ್ ನಾಯಕ್, ಡಾ.ಸದಾನಂದ ನಾಯಕ್, ಅಶೋಕ್ ಕಾಮತ್, ಪಾಶ್ವನಾಥ ಬಲ್ಲಾಳ್, ಮನೋಜ್ ಶೆಣೈ, ಶಾಂತಿ ಪ್ರಸಾದ್ ಹೆಗ್ಡೆ, ಕೇಶವ ಕರ್ಕೇರ, ಗೋಪಾಲ್ ಶೆಟ್ಟಿಗಾರ್, ಪ್ರಥ್ವಿರಾಜ್ ಜೈನ್, ಮತ್ತಿತರ ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.
0 Comments