ಮಂಗಳೂರು: ಚಿಕನ್ ಅಂಗಡಿ ಸಿಬ್ಬಂದಿಗಳಿಗೆ ರೌಡಿಶೀಟರ್‌ಗಳಿಂದ ಹಲ್ಲೆ; ಇಬ್ಬರ ಬಂಧನ

ಜಾಹೀರಾತು/Advertisment
ಜಾಹೀರಾತು/Advertisment

 

ಮಂಗಳೂರು: ಚಿಕನ್ ಅಂಗಡಿ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರೊಬ್ಬರಿಗೆ ಇಬ್ಬರು ರೌಡಿಶೀಟರ್‌ಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಪೊಲೀಸರು ಆರೋಪಿಗಳನ್ನು ಬಂಧಿಸಿದ ಘಟನೆ ಮಂಗಳೂರು ನಗರದ ವೆಲೆನ್ಸಿಯಾ ಜಂಕ್ಷನ್ ಬಳಿ ಸೋಮವಾರ ಸಂಭವಿಸಿದೆ.

ಪ್ರೀತಮ್ ಅಲಿಯಾಸ್ ಪ್ರೀತಮ್ ಪೂಜಾರಿ, ಧೀರಜ್ ಕುಮಾರ್ ಅಲಿಯಾಸ್ ಧೀರು ಬಂಧಿತ ರೌಡಿಶೀಟರ್‌ಗಳು. ಆರೋಪಿಗಳು ಸಾರ್ವಜನಿಕರೊಬ್ಬರಿಗೆ ಹಲ್ಲೆ ನಡೆಸಿದ್ದು, ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ್ದ ಚಿಕನ್ ಅಂಗಡಿಯ ಮೂವರು ಸಿಬ್ಬಂದಿಗಳ ಮೇಲೆ ಕಲ್ಲು, ಹೆಲ್ಮೆಟ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರಿಗೂ ಚೂರಿಯಿಂದ ತಿವಿಯಲು ಪ್ರಯತ್ನಿಸಿದ್ದು, ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪೊಲೀಸರು ಆರೋಪಿಗಳಿಬ್ಬರನ್ನು ವೈದ್ಯಕೀಯ ತಪಾಸಣೆ ನಡೆಸಿದ್ದು, ಆರೋಪಿಗಳು ಮದ್ಯ ಹಾಗೂ ಗಾಂಜಾ ಸೇವನೆ ಮಾಡಿರುವುದಾಗಿ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಧೀರಜ್ ಮೇಲೆ 8, ಪ್ರೀತಮ್ ಮೇಲೆ 10 ಪ್ರಕರಣಗಳು ದಾಖಲಾಗಿವೆ.


Post a Comment

0 Comments