ಮೂಡುಬಿದಿರೆ : ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಪೇಪರ್ ಮಿಲ್ಲ್ ಕೆಂಪ್ಲಾಜೆ ದೇವಸ್ಥಾನದ ಬಳಿಯಿಂದ ಪುಚ್ಚಮೊಗರು ಸೇತುವೆವರೆಗೆ ರೂ 7 ಕೋ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಸುರಕ್ಷತಾ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಉಮಾನಾಥ ಕೋಟ್ಯಾನ್ ಭಾನುವಾರ ಶಾಂತಿರಾಜ್ ಕಾಲನಿ ಬಳಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಕೋಟ್ಯಾನ್ ಅವರು ಜಿಲ್ಲಾ ಪಂಚಾಯತ್ ರಸ್ತೆಯನ್ನು ಮಧ್ಯಮ ಪಥದಿಂದ ದ್ವಿಪಥಗೊಳಿಸಿ ತಿರುವುಗಳನ್ನು ನೇರಗೊಳಿಸಿ ಅಗಲೀಕರಣ ಮಾಡಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗಿದೆ. ರೂ 7 ಕೋ.ವೆಚ್ಚದಲ್ಲಿ 7 ಕಿ.ಮೀ ರಸ್ತೆಯನ್ನು ಅಗಲೀಕರಣಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ಪಂಚಾಯತ್ ಸದಸ್ಯೆ ರುಕ್ಯ, ಭೂ ನ್ಯಾಯ ಮಂಡಳಿ ಸದಸ್ಯ ಹರೀಶ್ ಎನ್.ಪೂಜಾರಿ, ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಊರಿನ ಪ್ರಮುಖರಾದ ಆಲಂಗಾರು ಶ್ರೀನಿವಾಸ ಆಳ್ವ, ತುಳು ಸಾಹಿತಿ ಉಗ್ಗಪ್ಪ ಪೂಜಾರಿ,ಅಮ್ಮಿ ಕೋಟ್ಯಾನ್, ಮಹಮ್ಮದ್ ಝೂಬಿ, ಹನೀಫ್, ಪುತ್ತಿಗೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕುಮಾರ್, ವಕೀಲರಾದ ಎಂ.ಎಸ್.ಕೋಟ್ಯಾನ್, ಶಾಂತಿ ಪ್ರಸಾದ್ ಹೆಗ್ಡೆ, ಪಕ್ಷದ ಪ್ರಮುಖರಾದ ಅಜೇಯ್ ರೈ, ಯೋಗೀಶ್ ಶೆಟ್ಟಿ, ಇಂಜಿನಿಯರ್ ರಾಘವೇಂದ್ರ ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments