ಮನೆಯಿಂದಲೇ ಸಮಾನತೆಯನ್ನು ಕಾಣಬೇಕು-ಸಖಿ ಒನ್‌ ಸ್ಟಾಪ್‌ ಆಡಳಿತಾಧಿಕಾರಿ ಪ್ರಿಯಾ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಮನೆಯಿಂದಲೇ ಸಮಾನತೆಯನ್ನು ಕಾಣಬೇಕು. ಹೆಣ್ಣು-ಗಂಡು ಇಬ್ಬರೂ ಸರಿಸಮಾನರು ಹೆಣ್ಣೆಂಬ ತಾರತಮ್ಯವನ್ನು ಮೊದಲು ನಮ್ಮ ನಮ್ಮ ಮನೆಯಿಂದಲೇ ದೂರ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿಯಾದ ಲೇಡಿಗೋಶನ್‌ನ ಸಖಿ ಒನ್‌ ಸ್ಟಾಪ್‌ ಸೆಂಟರ್‌ ನ ಆಡಳಿತಾಧಿಕಾರಿ ಪ್ರಿಯಾ ತಿಳಿಸಿದರು. 

ಅವರು ಇಂದು ಇರುವೈಲು ಬೃಹ್ಮಶ್ರೀ ಗುರು ನಾರಾಯಣ ಸೇವಾ ಸಂಘದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾಮಾಂತರ) ಗ್ರಾಮ ಪಂಚಾಯತ್‌, ಸ್ತ್ರೀ ಶಕ್ತಿ ಗುಂಪುಗಳು, ಮಹಿಳಾ ಮಂಡಲ, ಸಂಜೀವಿನಿ ಒಕ್ಕೂಟ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಹಿಳೆಯರಿಗೆ ಸಲಹೆ ಸೂಚನೆಗಳನ್ನು ನೀಡಿದರು. 

ಹೆಣ್ಣಿನ ಮೇಲಿನ ದೌರ್ಜನ್ಯ ಎಂಬುದು  ಒಬ್ಬ ತಾಯಿಯಿಂದಲೇ ಆರಂಭವಾಗುತ್ತದೆ. ಹೆಣ್ಣು ಮಕ್ಕಳಲ್ಲಿ ಮಾತ್ರ ಮನೆ ಕೆಲಸ ಮಾಡಲು ಸಹಾಯವನ್ನು ತಗೊಂಡು ಗಂಡು ಮಕ್ಕಳಿಗೆ ತಾಯಿ ಏನೇ ಬೇಕಾದರೂ ನಾನೇ ಮಾಡಿಕೊಡುತ್ತೇನೆ ಎಂದು ಗಂಡನ್ನು ಮೇಲಿರಿಸಿ ಹೆಣ್ಣು ಮಾತ್ರ ಮನೆ ಕೆಲಸ ಮಾಡಬೇಕೆಂಬ ಜನರ  ತಪ್ಪು ಕಲ್ಪನೆ ತಮ್ಮ ಮನೆಯಿಂದಲೇ ದೂರವಾಗಬೇಕು ಎಂದರು.

 ಹೆಣ್ಣಿನ ಸಾಧನೆಯನ್ನು ಗುರುತಿಸುವ ದಿನವನ್ನು ರಾಷ್ಟೃೀಯ ಮಹಿಳಾ ದಿನಾಚರಣೆಯಂದು ಮಾಡುತ್ತೇವೆ. ಎಲ್ಲೇ ಯಾವುದೇ ಕಾರ್ಯಕ್ರಮವಿರಲಿ ಮಹಿಳಾ ಶಕ್ತಿಗಳು ಇರುತ್ತಾರೆ. ಆದರೆ ಮಹಿಳೆ ಸ್ವಾವಲಂಬಿಯೇ? ಕೆಲವೊಂದು ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ನಮಗಿದೆಯೇ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಬಂದಾಗ ಸಂಘಟನೆಗಳ ಮೊರೆ ಹೋಗುವುದಕ್ಕಿಂತ ಮೊದಲು ನಾವು ಸಂಘಟಿತರಾಗಿರಬೇಕು. ನಮ್ಮ ನಮ್ಮೊಳಗೆ ಸಂಘಟನಾತ್ಮಾಕ ಶಕ್ತಿ ಇದ್ದಾಗ ಯಾರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ. ಹೆಣ್ಣಿಗೇನು ಹಕ್ಕಿದೆ ಎಂಬುದನ್ನು ತಿಳಿದುಕೊಂಡು ಅದನ್ನು ಪಡೆದುಕೊಳ್ಳಲು ನಾವೇ ಪಣ ತೊಡಬೇಕು ಎಂದು  ಸೂಚಿಸಿದರು. 

ಅಧ್ಯಕ್ಷತೆಯನ್ನು ವಹಿಸಿದ ಇರುವೈಲ್‌ ಪಂಚಾಯತ್‌ನ ಅಧ್ಯಕ್ಷ ವಲೇರಿಯನ್‌ ಕುಟಿನ್ಹ್‌  ಮಾತನಾಡಿ ಹೆಣ್ಣನ್ನು ದ್ವೇಷಿಸಬಾರದು ಪ್ರೀತಿಯಿಂದ ನೋಡಬೇಕು. ಗಂಡು ಮಕ್ಕಳಿಗೆ ಮಾತ್ರ ಶಿಕ್ಷಣವನ್ನು ನೀಡದೇ ಹೆಣ್ಣು ಮಕ್ಕಳಿಗೂ ಶಿಕ್ಷಣವನ್ನು ನೀಡಿ, ಸುಶಿಕ್ಷಿತರನ್ನಾಗಿಸಬೇಕೆಂದರು.  .

ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಮಾತಾಡಿ" ಶೇ 50 ರಷ್ಟು ಮೀಸಲಾತಿಯನ್ನು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗಾಗಿ ಕಾಯ್ದಿರಿಸಲಾಗಿದ್ದು ಈ ಮೀಸಲಾತಿಯನ್ನು ಪಡೆದುಕೊಳ್ಳಲು

ಪ್ರತಿ ಹೆಣ್ಣು ಸನ್ನದ್ಧರಾಗಿರಬೇಕು. ಹೆಣ್ಣು ಮುಂದೆ ಬಂದಾಗ ಮಾತ್ರ ಸರ್ಕಾರ ಹೆಣ್ಣು ಮಕ್ಕಳಿಗೆಂದು ಜಾರಿ ತಂದ ಯೋಜನೆಗಳನ್ನು ಬಳಸಿಕೊಳ್ಳಲು ಸಾಧ್ಯ. ಅಂಜಿಕೆಯನ್ನು ಬಿಟ್ಟು ಮುಂದೆ ಬಂದು ಜಾರಿ ಬಂದ ಯೋಜನೆಗಳ ಸದ್ಭಾಳಕೆಯನ್ನು ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯೆ ನಾಗಮ್ಮ ಅವರನ್ನು ಸನ್ಮಾನಿಸಿ, ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಆಟೋಟ ಸ್ಪರ್ಧೆಯಲ್ಲಿ  ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಿ, ನಂತರ ಅಂಗನವಾಡಿ ಮಕ್ಕಳಿಗೆ ಸ್ಕೌಟ್ಸ್‌ ಗೈಡ್ಸ್‌ ಸಮವಸ್ತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್‌ ಸದಸ್ಯರಾದ ನಾಗೇಶ್‌, ನವೀನ್‌ ಪೂಜಾರಿ, ರುಕ್ಮಿಣಿ, ಮೋಹಿನಿ, ಕುಸುಮ, ಮೋಹಿನಿ, ಕುಸುಮ, ‌ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ, ಆರೋಗ್ಯ ಕಾರ್ಯದರ್ಶಿ ಮೀನಾಕ್ಷಿ  , ಬೃಹ್ಮಶ್ರೀ ಗುರು ನಾರಾಯಣ ಸೇವಾ ಸಂಘ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ದಿನೇಶ್ , ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ನಳಿನಾಕ್ಷಿ , ಹಾಗೂ ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೀನ ನಾಯ್ಕ್‌ ನಿರೂಪಿಸಿ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಭಾರತಿ ಸ್ವಾಗತಿಸಿದರು. ಹಾಗೂ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಧನ್ಯಾವಾದಗೈದರು.

Post a Comment

0 Comments