ಮೂಡುಬಿದಿರೆ: ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದೊಂದು ಕಲೆಯನ್ನು ಮೈಗೂಡಿಸಿಕೊಂಡಿರುತ್ತಾರೆ, ಕೆಲವೊಬ್ಬರಿಗೆ ತನಗೇನು ಸಾಮರ್ಥ್ಯವಿದೆ ಎಂಬುದನ್ನು ಮರೆತು ಹೋಗುತ್ತಾರೆ, ಆದರೆ ಇನ್ನೂ ಕೆಲಮಂದಿ ಬಾಲ್ಯದಿಂದಲೇ ಆಟ, ಪಾಠ, ಚಿತ್ರಕಲೆ, ನೃತ್ಯ ಇನ್ನಿತರ ಕಲೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಅಂತಹ ಕಲೆಗಾರರಲ್ಲಿ ಮೂಡಿ ಬಂದ ಅದ್ಭುತ ಪ್ರತಿಭೆ ದೀಪಕ್ ಆಚಾರ್ಯ ಮಲ್ಪೆ.
ಗಂಗಾಧರ್ ಆಚಾರ್ಯ ಹಾಗೂ ಪ್ರೇಮ ಅವರ ಮಗನಾಗಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಗರಡಿಮಜಲ್, ಪ್ರೌಢ ಶಿಕ್ಷಣವನ್ನು ಉಡುಪಿಯ ಆದಿ ಉಡುಪಿ ಪೂರ್ಣಗೊಳಿಸಿದ ಇವರು ೨೦೧೫-೧೬ರಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಇಡೀ ಸ್ಕೂಲ್‌ಗೆ ಸೆಕೆಂಡ್ ಟಾಪರ್ ಆಗಿದ್ದರು. ನಂತರ ಪದವಿಪೂರ್ವ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ಶಾಮಿಲಿ ಇಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿ ಉನ್ನತ ಶಿಕ್ಷಣವನ್ನು ಮೂಡುಬಿದಿರೆಯ ಪ್ರತಿಷ್ಠಿತ ಕಾಲೇಜಾದ ಆಳ್ವಾಸ್‌ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದು ಇದೀಗ ಬೆಂಗಳೂರಿನ ಇಂಜಿಲಿಂಕ್ಸ್ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಲ್ಯದಲ್ಲಿಯೇ ತಾನೊಬ್ಬ ಚಿತ್ರ ಕಲಾವಿದನಾಗಬೇಕೆಂಬ ಮಹದಾಸೆಯನ್ನು ಹೊಂದಿದ ದೀಪಕ್ ತನ್ನ ನಿರಂತರ ಸ್ವ ಪ್ರಯತ್ನದಿಂದ ಯಾವುದೇ ಚಿತ್ರಕಲಾ ತರಗತಿಗೆ ಹೋಗದೇ ಮೊದಲು ಕಾಲ್ಪನಿಕ ಚಿತ್ರಗಳನ್ನು ಬಿಡಿಸಲು ಆರಂಭಿಸಿದ್ದು, ನಂತರದ ದಿನಗಳಲ್ಲಿ ದೇವರು, ವ್ಯಕ್ತಿಗಳ ಭಾವಚಿತ್ರಗಳು ಹೊಳುವಂತಹ ತದ್ರುರೂಪಿ ಚಿತ್ರಗಳನ್ನು ಬಿಡಿಸಲು ಆರಂಭಿಸಿದ ಇವರು ನಂತರದ ದಿನಗಳಲ್ಲಿ ಚಿತ್ರಗಳನ್ನು ಬಿಡಿಸಿ ಕೊಡುವಂತೆ ಬೇಡಿಕೆಗಳು ಹೆಚ್ಚಾದಾಗ ವಿದ್ಯಾಭ್ಯಾಸದ ಜೊತೆಗೆ ಇದನ್ನು ಪಾರ್ಟ್ ಟೈಮ್ ಉದ್ಯೋಗವನ್ನಾಗಿಸಿಕೊಂಡು ಬಿಡುವಿನ ಸಮಯದಲ್ಲಿ ಆರ್ಡರ್‌ಗೆ ಬಂದ ಚಿತ್ರಗಳನ್ನು ಬಿಡಿಸಿ ಆದರಿಂದ ಬಂದ ಸಂಪಾದನೆಯಲ್ಲಿ ತಮ್ಮ ವಿದ್ಯಾಭ್ಯಾಸಕ್ಕೂ ವಿನಿಯೋಗಿಸಿ, ಮನೆಯ ಖರ್ಚು ವೆಚ್ಚವನ್ನು ಸರಿದೂಗಿಸಿಕೊಳ್ಳುತ್ತಿದ್ದರು
ಕಲಿಕೆ, ಚಿತ್ರಕಲೆ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿಯೂ ಮಿಂಚಿದ ಇವರು 2019-20ರಲ್ಲಿ ನಡೆದ ರಾಕ್ ಬಾಲ್ ಆಮೆಚೂರ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಕಂಚಿನ ಪದಕ ಗಳಿಸಿದ್ದು, ನಂತರ 2020-21 ರ ಸಾಲಿನಲ್ಲಿ ಇದೇ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ವಾಲಿಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕವನ್ನು ಪಡೆದು ಕ್ರೀಡಾ ಕ್ಷೇತ್ರದಲ್ಲಿಯೂ ಸೈ ಅನಿಸಿಕೊಂಡಿದ್ದಾರೆ.
ಕೊರೋನಾ ಸಾಂಕ್ರಾಮಿಕ ಕಾಯಿಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಇವರು ಯೂಟ್ಯೂಬ್ ಚಾನೆಲ್‌ನ ಸಹಾಯದಿಂದ ಚಿತ್ರಕಲೆಯನ್ನು ಕಲಿಯುವ ಒಲವನ್ನು ಇನ್ನಷ್ಟು ಬಲಪಡಿಸಿಕೊಂಡರು. ತನ್ನ ಕಲ್ಪನೆಗೆ ಶಕ್ತಿ ನೀಡಿ ಇವರ ಕಲೆಯನ್ನು ಹಿಮ್ಮಡಿಗೊಳಿಸಿಕೊಂಡು ಸಾಫ್ಟವೇರ್ ಇಂಜಿನಿಯರ್ ಹುದ್ದೆಯ ಜೊತೆಜೊತೆಗೆ ಕಲೆಯನ್ನು ತಮ್ಮ ಪಾರ್ಟ್ ಟೈಮ್ ಕೆಲಸವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರ ಈ ಸಾಧನೆ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂಬುದೇ ನಮ್ಮೆಲ್ಲರ ಹಾರೈಕೆ
0 Comments