ನವದೆಹಲಿ: ಏಪ್ರಿಲ್ 1 ಅಂದರೆ ಹೊಸ ಆರ್ಥಿಕ ವರ್ಷ ಆರಂಭವಾಗುವ ಸಮಯದಲ್ಲಿ ಕೇಂದ್ರ ಈಗಾಗಲೇ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಇದರಿಂದ ಜನತೆಗೆ ಸಂಕಷ್ಟ ಎದುರಾಗಿದ್ದು, ಹೊಸ ಆರ್ಥಿಕ ನಿಯಮಗಳ ಜೊತೆಗೆ ಮತ್ತಷ್ಟು ದರ ಏರಿಕೆಯಾಗಿದೆ.
ಆರ್ಥಿಕ ನೀತಿಗಳಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳೂ ಆಗ್ತಿವೆ. ಜನಸಾಮಾನ್ಯನಿಗೆ ಬೆಲೆ ಏರಿಕೆಯ ಬಿಸಿಯೂ ಯಾವ ರೀತಿ ಇದೆ ಎಂದು ನೋಡ್ಕೊಂಡು ಬರೋಣ..
ಐಟಿ ರಿಟರ್ನ್: ಇನ್ಮುಂದೆ ಪರಿಷ್ಕೃತ ಐಟಿ ರಿಟರ್ನ್ಗೆ 2 ವರ್ಷ ಅವಕಾಶ ಕಲ್ಪಿಸುವುದು. ತಪ್ಪು ತಿದ್ದುಪಡಿ ಮಾಡಲು 2 ವರ್ಷಗಳ ಅವಧಿ ಮಾತ್ರ.
ಹಿರಿಯ ನಾಗರಿಕರಿಗೆ ವಿನ್ತಾಯಿ: 75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ ವಿನಾಯಿತಿ. ಕೆಲ ಷರತ್ತು ಪೂರೈಸಿದರೆ ಮಾತ್ರ ಇದು ಅನ್ವಯಿಸುತ್ತದೆ.
ಕ್ರಿಪ್ಟೋ ತೆರಿಗೆ: ಎಲ್ಲಾ ರೀತಿಯ ಡಿಜಿಟಲ್ ಆಸ್ತಿಗೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ. ಗಿಫ್ಟ್ ರೂಪದಲ್ಲಿ ಬರೋ ಕ್ರಿಪ್ಟೋ ಕರೆನ್ಸಿಗೂ ಟ್ಯಾಕ್ಸ್
ಪಿಎಫ್ಗೆ ತೆರಿಗೆ: ವಾರ್ಷಿಕ 2.5 ಲಕ್ಷ ರೂಪಾಯಿ ದಾಟಿದರೆ ಟ್ಯಾಕ್ಸ್ ವಿಧಿಸಲಾಗುವುದು. ಇನ್ಮುಂದೆ ತೆರಿಗೆ, ತೆರಿಗೆ ಮುಕ್ತ ಎಂಬ 2 ಖಾತೆ ಇರಲಿದೆ.
ಹೊಸ ಪಿಂಚಣಿ ಯೋಜನೆ: ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚನಿ ಯೋಜನೆ ರಚಿಸಲಾಗುತ್ತದೆ. ಕ್ಲೈಮ್ನಲ್ಲಿ ಮಾರ್ಪಾಡು, ಮೂಲ ವೇತನ, ತುಟ್ಟಿಭತ್ಯೆಯಲ್ಲಿ ಶೇ.14ರಷ್ಟು ನೀಡಬಹುದಾಗಿದೆ. ಹಾಗೆಯೇ, ಶೇ.14ರಷ್ಟು ಹಣವನ್ನು ಹಿಂಪಡೆಯಬಹುದಾಗಿದೆ.
ಕೆವೈಸಿ ಕಡ್ಡಾಯ: ಬ್ಯಾಂಕ್ ಖಾತೆಗಳಿಗೆ ಕೆವೈಸಿ ಕಡ್ಡಾಯ ಇರಲಿದೆ. ಕೆವೈಸಿ ಅಪ್ಡೇಡ್ ಮಾಡದ ಅಕೌಂಟ್ ಸ್ಥಗಿತವಾಗಲಿದೆ.
ಸ್ಥಿರಾಸ್ತಿ ಮಾರಾಟದ ತೆರಿಗೆ: 50ರೂ. ಲಕ್ಷಕ್ಕಿಂತ ಹೆಚ್ಚಿನ ಆಸ್ತಿ ಮಾರಾಟಕ್ಕೆ ತೆರಿಗೆ. ಮೂಲ ಹಣದಲ್ಲೇ ಶೇ.1ರಷ್ಟು TDS ಕಡಿತಗೊಳಿಸಲಾಗಿದೆ. ಉಳಿದ ಹಣವನ್ನು ಮಾರಾಟಗಾರರಿಗೆ ಪಾವತಿಸಬೇಕು. ಈ ರೀತಿಯ ತೆರಿಗೆ ಕೃಷಿ ಭೂಮಿಗೆ ಅನ್ವಯ ಆಗಲ್ಲ.
ಮ್ಯೂಚುಯಲ್ ಫಂಡ್: ಮ್ಯೂಚುಯಲ್ ಫಂಡ್ ಲಾಭಾಂಶದ ಮೇಲೆ ತೆರಿಗೆ. ಮ್ಯೂಚುಯಲ್ ಫಂಡ್ಗೆ ಎರಡು ರೀತಿಯ ತೆರಿಗೆ ವಿಧಿಸಲಾಗುತ್ತದೆ. ಮ್ಯೂಚುಯಲ್ ಫಂಡ್ಗೆ ಡಿಜಿಟಲ್ ಪಾವತಿ ಕಡ್ಡಾಯಗೊಳ್ಳಲಿದೆ.
ಕೋವಿಡ್ ಚಿಕಿತ್ಸಾ ವೆಚ್ಚಕ್ಕೆ ರಿಲೀಫ್: ಇನ್ಮುಂದೆ ಕೋವಿಡ್ ಚಿಕಿತ್ಸಾ ವೆಚ್ಚಕ್ಕೆ ತೆರಿಗೆ ಇಲ್ಲ. ಮೃತ ರೋಗಿಯ ಕುಟುಂಬ ಪಡೆಯುವ ಹಣಕ್ಕೂ ವಿನಾಯಿತಿ ನೀಡಲಾಗುವುದು.
ಆಧಾರ್ ಲಿಂಕ್ ಕಡ್ಡಾಯ: ಇನ್ಮುಂದೆ ಪ್ಯಾನ್ಗೆ ಆಧಾರ್ ಲಿಂಕ್ ಕಡ್ಡಾಯ. ವಿಳಂಬ ಮಾಡಿದ್ರೆ 500 ರೂಪಾಯಿ ದಂಡ.
ದುಬಾರಿಯತ್ತ ನವಭಾರತ
ಇನ್ಮುಂದೆ ಗೃಹ ಖರೀದಿಗೆ ತೆರಿಗೆ ವಿನಾಯ್ತಿ ಇಲ್ಲ.
800 ಅಗತ್ಯ ಔಷಧಿಗಳ ದರ ಶೇ.10ರಷ್ಟು ಹೆಚ್ಚಳ.
ಇನ್ಮುಂದೆ ಹೊಸ ವಾಹನಗಳ ದರ ಹೆಚ್ಚಳ.
ಇಂದಿನಿಂದ ಸರ್ಕಾರಿ ವಾಹನಗಳಿಗೆ ಸ್ಕ್ರ್ಯಾಪ್ ನೀತಿ.
ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳವಾಗಿರುವ ದಿನ.
ಹೀಗೆ ಏಪ್ರಿಲ್ 1 ಫೂಲ್ ದಿನ ಮಾತ್ರ ಅಲ್ಲದೆ, ಭಾರತದಲ್ಲಿ ಹೊಸ ಆರ್ಥಿಕ ವರ್ಷದ ಉದಯದ ದಿನ ಕೂಡ ಹೌದು. ಹೊಸ ಹೊಸ ಆರ್ಥಿಕ ಚಟುವಟಿಕೆಗಳು, ಹೊಸ ನಿಯಮಗಳು, ಬಜೆಟ್ನಲ್ಲಿ ಘೋಷಣೆಯಾಗಿರೋ ಅಂಶಗಳು ಜಾರಿಯಾಗೋ ದಿನವಾಗಿದೆ.
0 Comments