ಮೂಡುಬಿದಿರೆ : ಮೂಡುಬಿದಿರೆ ಪರಿಸರದಲ್ಲಿ 10 ಬೆಡ್‌ಗಳೊಳಗೊಂಡ ಬಹಳ ಅಚ್ಚುಕಟ್ಟಾದ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗಿದೆ, ವೈದ್ಯರ ಆರೋಗ್ಯದ ಗುಟ್ಟು ಏನೆಂದರೆ ಉತ್ತಮವಾದ ಸಹೃದಯದ ಭಾವನೆ, ಹೃದಯ ಶ್ರೀಮಂತಿಕೆಯಿರಬೇಕು. ಇಲ್ಲಿಯ ಹಣಕ್ಕಿಂತ ಹೆಚ್ಚು ಆರೋಗ್ಯದ ಕಡೆ ಗಮನ ಕೊಡುವುದರಿಂದ ಕೋವಿಡ್ ಸಂಕಷ್ಟದಲ್ಲಿ ಜನರಿಗೆ ಉತ್ತಮ ಸೇವೆಯನ್ನು ನೀಡಲಾಗುತ್ತದೆ ಎಂದು ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಶ್ಲಾ ಘಿ ಸಿ ದರು.
ಅವರು ರವಿವಾರದಂದು ಮೂಡುಬಿದಿರೆಯ ಜ್ಯೋತಿನಗರದ ರತ್ನವರ್ಮನಗರದಲ್ಲಿನ ಜೈನ್ ಮೆಡಿಕಲ್ ಸೆಂಟರ್ ಅನ್ನು ಉದ್ಘಾಟಿಸಿದರು.
ಡಾಕ್ಟರ್‌ನವರಲ್ಲಿ ದೇವರನ್ನು ಕಂಡರೆ, ಕರುಣೆಯಿಂದ ಬೇಗನೆ ಗುಣಮುಖವಾಗುತ್ತಾರೆ. ಹಲವಾರು ವೈದ್ಯ ಸಮುದಾಯವು ತಾವೇ ಸ್ವಂತ: ಖರ್ಚಿನಿಂದ ಎಷ್ಟೋ ಮಂದಿ ಬಡರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನೀಡುತ್ತಿರುವುದನ್ನು ತೋರಿಸಲಾಗಿದೆ. ಎಂದ ಅವರು ಮೂಡುಬಿದಿರೆಯಲ್ಲಿ ಹೆಚ್ಚು ರೀತಿಯ ಯಂತ್ರಗಳು, ತಂತ್ರಜ್ಞಾನಗಳು ಬರಲಿ, ಎಲ್ಲಾ ರೀತಿಯ ಸೌಲಭ್ಯಗಳು ಜನತೆಗೆ ಲಭ್ಯವಾಗಲಿ ಎಂದು ಆರ್ಶಿವಾದಿಸಿದರು.
ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ಕೊರ್ಪಸ್ ಟೌನ್ ಚರ್ಚಿನ ರೇ| ಫಾ|ಫೌಲ್ ಸಿಕ್ವೇರಾ, ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಜನಾಬ್ ಮುಸ್ತಾಫ್ ಯಾಮನಿ, ಮಾಜಿ ಸಚಿವ ಕೆ. ಅಭಯಚಂದ್ರಜೈನ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಕೆ.ಎಂ.ಸಿ ಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್, ಇ.ಎನ್.ಟಿ ತಜ್ಞ ಡಾ| ಗಂಗಾಧರ್ ಸೋಮಯಾಜಿ, ಎಪಿಎಂಸಿ ಅಧ್ಯಕ್ಷ ಕೆ ಕೃಷ್ಣರಾಜ್ ಹೆಗ್ಡೆ, ಡಾ|ಮಹಾವೀರ್ ಜೈನ್, ಡಾ| ಪ್ರಣಾಮ್ಯ ಸಂಬಂಧಪಟ್ಟ ಗಣ್ಯರು.
0 Comments