ಮೂಡುಬಿದಿರೆ: ಕೋಮುಹಿಂಸೆಗೆ ಪ್ರಚೋದನೆ ನೀಡುತ್ತಿರುವ ಸಚಿವ ಈಶ್ವರಪ್ಪರಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಕೆಲವು ಮುಸಲ್ಮಾನ ಗೂಂಡಾಗಳನ್ನು ಬಳಸಿಕೊಂಡು ಹರ್ಷಾನನ್ನು ಕೊಲೆ ಮಾಡಿಸಿದ್ದೀರಿ. ನಿಮ್ಮ ಫ್ಯಾಸಿಸ್ಟ್ ಸಿದ್ಧಾಂತವನ್ನು ಮುಂದುವರಿಸಲು ನಾವು ಬಿಡುವುದಿಲ್ಲ. ನಿಮ್ಮಂತಹ ದೇಶವಿರೋಧಿಗಳ ವಿರುದ್ಧ ಮುಂದಿನ ಚುನಾವಣೆಯಲ್ಲಿ ಹೋರಾಟ ನಡೆಸಿ ತಕ್ಕ ಪಾಠ ಕಲಿಸುತ್ತೇವೆ ಎಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಧ್ಯಕ್ಷ ಆಸಿಫ್ ಕೋಟೆಬಾಗಿಲುಎಚ್ಚರಿಸಿದರು.
ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ಮೂಡುಬಿದಿರೆಯಲ್ಲಿಬುಧವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಿಜಾಬ್ ಬಗ್ಗೆ ವಿಧಾನಸಭೆಯಲ್ಲಿ ಸರಿಯಾದ ಧ್ವನಿ ಎತ್ತದ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಅಂತಾಕ್ಷರಿ ಹಾಡಿ ಸಮಯ ಕಳೆಯುತ್ತಿದ್ದಾರೆ. ಈಶ್ವರಪ್ಪರನ್ನು ವಜಾ ಮಾಡಬೇಕೆಂದು ಠಿಕಾಣಿ ಹೂಡಿದ್ದೀರಿ, ಠಿಕಾಣಿ ಹೂಡಿ ಆಂತಕ್ಷರಿ ಆಡುತ್ತಾ ಕುಳಿತ್ತಿದ್ದೀರಾ ಡಿ.ಕೆ.ಶಿವಕುಮಾರ್‌ರವರೇ ಆಂತಕ್ಷರಿ ಆಡಲು ವಿಧಾನಸಭೆಯಲ್ಲಿ ಸ್ಥಳಾವಕಾಶ ನೀಡಿರುವುದೇ? ಶಿವಮೊಗ್ಗ ಹೊತ್ತಿ ಉರಿಯುತ್ತಿದೆ ಆದರೆ ನೀವು ಆಂತಕ್ಷರಿ ಆಟ ಆಡುತ್ತಾ ಕುಳಿತಿದ್ದೀರಿ ನಿಮಗೆ ನಾಚಿಕೆ ಆಗುದಿಲ್ಲವೇ ? ನಿಮ್ಮಂತವರು ಜನಪ್ರತಿನಿಧಿಯಾಗಲು ನಾಲಾಯಕ್. ಡಿಕೆಶಿ ಅವರು ಈಶ್ವರಪ್ಪ ಹೆಗಲಿಗೆ ಕೈಹಾಕಿ ಸುತ್ತಾಡುತ್ತಿದ್ದಾರೆ. ಮುಸಲ್ಮಾನರ ಬೆಂಬಲ ಇಲ್ಲದೆ ನಿಮಗೆ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ಗೊತ್ತಿದ್ದು ಈ ರೀತಿ ಮಾಡುತ್ತಿದ್ದೀರಿ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಮತವನ್ನು ಹೊಂದಿರುವ ಮುಸಲ್ಮಾನ ಸಮುದಾಯಕ್ಕೆ ನೀವು ಅವಹೇಳನ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೀರಿ ಮುಂದಿನ ಚುನಾವಣೆಯಲ್ಲಿ ನಿಮಗೆ ಎಸ್‌ಡಿಪಿಐ ಬೃಹತ್ ರೀತಿಯಲ್ಲಿ ತಡೆ ಒಡ್ಡಲಿದೆ ಎಂದು ಎಚ್ಚರಿಸಿದರು.
ಮಂಗಳೂರು ಉತ್ತರ ಕ್ಷೇತ್ರದ ಕಾರ‍್ಯದರ್ಶಿ ಅಶ್ರಫ್ ಅಡ್ಡೂರು ಮಾತನಾಡಿ ಮುಂಬರುವ ಚುನಾವಣೆ ವೇಳೆ ಕೋಮುಗಲಭೆ ಸೃಷ್ಟಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಸಚಿವ ಈಶ್ವರಪ್ಪ ಅವರ ಪ್ರಚೋದನೆಯಿಂದ ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಕಾರ‍್ಯಕರ್ತ ಹರ್ಷಾ ಅವರ ಕೊಲೆ ನಡೆದಿರುವುದು ಪುಷ್ಠಿ ನೀಡಿದೆ. ಇಂತಹ ನಾಯಕರನ್ನು ಇನ್ನೂ ಸಚಿವ ಸ್ಥಾನದಲ್ಲಿ ಮುಂದುವರಿಸಿರುವುದು ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ಹೇಳಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳ ಹರ್ಷಾನನ್ನು ಕೊಲೆ ಮಾಡಿದ ಆರೋಪಿಗಳ ಮಾಹಿತಿ ಪೊಲೀಸರಿಗಿಂತ ಮೊದಲೆ ಈಶ್ವರಪ್ಪ ಅವರಿಗೆ ಗೊತ್ತಾಗಬೇಕಾದರೆ ಈ ಕೃತ್ಯ ಇವರ ಪ್ರಚೋದನೆಯಿಂದಲೆ ನಡೆದಿದೆ ಎನ್ನುವುದು ಸಾಬೀತಾದಂತಾಗಿದೆ. ಈಶ್ವರಪ್ಪ ಅವರನ್ನು ಮಂಪರು ಪರೀಕ್ಷೆಗೊಳಪಡಿಸಿದರೆ ಸತ್ಯ ಹೊರಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಆಸಿಫ್ ತೋಡಾರು, ನಿಸಾರ್ ಮಾರೂರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು
0 Comments