ಮೂಡುಬಿದಿರೆ :ಮಹಾಭಾರತ ಪಾತ್ರ ಅನುಸಂಧಾನ ಪುಸ್ತಕವನ್ನು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮೂಡಬಿದಿರೆಯ ಅಲಂಗಾರು ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು .ಮಹಾಭಾರತ ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಅವರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು .
ಇದೇ ಸಂದರ್ಭ ಬನ್ನಂಜೆ ಗೋವಿಂದಾಚಾರ್ಯ ಅವರ ನುಡಿ ನಮನವು ನಡೆಯಿತು .
ಕೃತಿಕರ್ತ ನಿವೃತ್ತ ಶಿಕ್ಷ ಕ ಶಿಕಾರಿಪುರ ಈಶ್ವರ್ ಭಟ್ ಮಾತನಾಡಿ ಮಹಾಭಾರತದ ಎಲ್ಲ ಪಾತ್ರಗಳು ನಮ್ಮ ನಡುವೆ ನಮ್ಮ ಒಳಗೆ ನಮ್ಮ ಸುತ್ತಮುತ್ತ ಇಂದಿಗೂ ಕಾಣಸಿಗುತ್ತದೆ ಇದೊಂದು ನಿತ್ಯ ನೂತನವಾದ ಪಾತ್ರ ಎಂದು ಹೇಳಿದರು .ಪರೋಪಕಾರ ಮಾಡುವುದೇ ಪುಣ್ಯ ಇತರರನ್ನು ಪೀಡಿಸುವುದು ಪಾಪ ಎಂಬ ಅಮೂಲ್ಯ ಸಂದೇಶವನ್ನು ಮಹಾಭಾರತ ನಮಗೆ ನೀಡಿದೆ ಎಂದು ಅಭಿಪ್ರಾಯಿಸಿದರು .ಧರ್ಮ ಮತ್ತು ಮೋಕ್ಷ ದ ಭದ್ರ ಬೇಲಿಯ ನಡುವೆ ಬದುಕು ಕಟ್ಟೋಣ ಎಂದು ವ್ಯಾಖ್ಯಾನಿಸಿದರು .
ಆಲಂಗಾರು ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು .
ಹಿರಿಯ ಪತ್ರಕರ್ತ ದು ಗು ಲಕ್ಷ್ಮಣ ನುಡಿನಮನ ಸಲ್ಲಿಸಿ ಕೃತಿ ಪರಿಚಯ ಮಾಡಿದರು .
ರಘುನಂದನ ಭಟ್ಟ ನರೂರು ',ವಿನಯ ಬನ್ನಂಜೆ ವೇದಿಕೆಯಲ್ಲಿದ್ದರು .
ಶಿಕಾರಿಪುರ ಈಶ್ವರ ಭಟ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು ವೆಂಕಟ್ರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು . ಸದಾನಂದ ನಾರಾವಿ ವಂದಿಸಿದರು .
0 Comments