ಕಾಂಗ್ರೆಸಿನಿಂದ ರಾಜ್ಯದ ಜನತೆಗೆ ದ್ರೋಹ: ಉಮಾನಾಥ ಕೋಟ್ಯಾನ್ ಆರೋಪ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ: ಬೇರೆ ಬೇರೆ ರೀತಿಯ  ಬೇರೆ ನಾಟಕಗಳನ್ನು ಆಡುತ್ತಿರುವ  ಕಾಂಗ್ರೆಸ್ ಪಕ್ಷ  ಈ ರಾಜ್ಯದ ಜನತೆಗೆ ದ್ರೋಹ ಮಾಡುವಂಥ ಕೆಲಸ ಮಾಡುತ್ತಿರುವುದು ಖಂಡನಿಯ. ಎಂದು ಉಮಾನಾಥ ಕೋಟ್ಯಾನ್ ಹೇಳಿದರು.  ಕಾಂಗ್ರೆಸ್ ಅಧಿವೇಶನದಲ್ಲಿ ಸಮಯ ವ್ಯರ್ಥ ಮಾಡಿರುವ ಕಾಂಗ್ರೆಸ್ ವಿರುದ್ಧ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಖಂಡಿಸಿ ಸೋಮವಾರ ಕೆ.ಎಸ್ .ಆರ್ .ಟಿ.ಸಿ .ಬಸ್ ನಿಲ್ದಾಣದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ನಮ್ಮ ಸರ್ಕಾರ ಇರುವಾಗಲೇ ಈ ರೀತಿ ದೌಜನ್ಯವನ್ನು ವಿರೋಧಪಕ್ಷದವರು ಮಾಡುತ್ತ ಇದ್ದಾರೆ. ಅಲ್ಲದೆ ಬಿಜೆಪಿ ಪಕ್ಷದವರು ವಿಧಾನಸಭೆಗೆ ಮತ್ತು ಶಾಸನಕ್ಕೆ ಅಪಮಾನ ಮಾಡಿದ್ದಾರೆಂದು ಪ್ರತಿಭಟಿಸುವ ಮೂಲಕ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುವಂಥ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಜನರ ಆಶೋತ್ತರಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರವು ನಡೆಸುವ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ ನಡೆಸಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಾರೆ.

ಸಚಿವ ಈಶ್ವರಪ್ಪ ಅವರು ವಿಧಾನ ಸಭೆಯ ಹೊರಗಡೆ ಮಾತನಾಡಿರುವ ಹೇಳಿಕೆಗೆ ಅಪಾರ್ಥ ಕಲ್ಪಿಸಿ ಅಧಿವೇಶನದಲ್ಲಿ ಬೊಬ್ಬೆ ಹಾಕಿರುವ ಕಾಂಗ್ರೆಸ್  ಚರ್ಚೆಗೆ ಅವಕಾಶ ನೀಡದೆ ಹಿಜಾಬ್ ವಿಷಯವನ್ನು ಮರೆ ಮಾಚಲು ಹುನ್ನಾರ ನಡೆಸಿದೆ. ಈಶ್ವರಪ್ಪ ದೇಶದ್ರೋಹದ ಕೆಲಸ ಮಾಡಿಲ್ಲೆಂದು ಸಚಿವರ ಪರವಾಗಿ ನಿಂತ ಕೋಟ್ಯಾನ್ ಅವರು ಕಾಂಗ್ರೆಸ್ ಅಧಿಕಾರಗಿಟ್ಟಿಸಿಕೊಳ್ಳಲು 5 ವರ್ಷದ ಬಳಿಕ ನೀರಿಗಾಗಿ ಜಾಥಾವನ್ನು ಆರಂಭಿಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ  ಮೇಕೆದಾಟು ಯೋಜನೆಯನ್ನು ಮಾಡದೆ ಇದೀಗ ಬಿಜೆಪಿ ಪಕ್ಷ ಯೋಜನೆಯನ್ನು ರೂಪಿಸುತ್ತಿರುವಾಗ ತಕರಾರು ತೆಗೆಯುತ್ತಿದ್ದಾರೆ ಇದನ್ನು ಬಿಜೆಪಿ ಪಕ್ಷವು ವಿರೋಧಿಸುತ್ತದೆ  ಎಂದ ಅವರು ವಿಧಾನಸೌಧದಲ್ಲಿ ಅಂತ್ಯಾಕ್ಷರಿ ಆಡುವ ಮೂಲಕ ಸದನದ ಘನತೆಯನ್ನು ಕುಂದಿಸಿರುವ ಕಾಂಗ್ರೆಸ್ ವಿರುದ್ಧ

 ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡುವುದಾಗಿ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ,  ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಆರ್ ಪಂಡಿತ್ ಉಪಸ್ಥಿತರಿದ್ದರು  ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಮತಾಂಧರಿಗಳಿಂದ ಕೊಲೆಯಾದ ಹರ್ಷ ಅವರಿಗೆ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು.

ಮಂಡಲ ಪ್ರ.ಕಾರ್ಯದರ್ಶಿಗಳಾದ ಗೋಪಾಲ ಶೆಟ್ಟೆಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೇಶವ ಕರ್ಕೇರಾ ವಂದಿಸಿದರು.

Post a Comment

0 Comments