ಮೂಡುಬಿದಿರೆ ತಾಲೂಕಿನಲ್ಲಿ ಡಿಸಿ "ಗ್ರಾಮ ವಾಸ್ತವ್ಯ"

ಜಾಹೀರಾತು/Advertisment
ಜಾಹೀರಾತು/Advertisment

 

  ಮೂಡುಬಿದಿರೆ : ನಿವೇಶನ ರಹಿತ ಜನರಿಗೆ ಸರ್ವೇ ನಂಬರ್ 308 ರಲ್ಲಿ 10 ಎಕರೆ ಜಾಗವನ್ನು  ಇಂದೇ ಮನೆ ನಿವೇಶನಕ್ಕಾಗಿ ಕಾಯ್ದಿರಿಸಿ 6 ತಿಂಗಳಲ್ಲಿ ನಿವೇಶನ ರಹಿತ ಬಡ ಜನರಿಗೆ  ನಿವೇಶನ ಮಾಡಿ ಅವರಿಗೆ ಜಾಗ ನೀಡುವಂತಹ ವ್ಯವಸ್ಥೆ ಆಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ  ಸೂಚನೆ ನೀಡಿದರು. 

ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ  ಮತ್ತು ಜಿಲ್ಲಾ ಪಂಚಾಯತ್ ನ ಜಂಟಿ ಆಶ್ರಯದಲ್ಲಿ ನಡೆದ ಪಾಲಡ್ಕ ಗ್ರಾಮದ  ಪೂಪಾಡಿಕಲ್ಲು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 

ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಇಲಾಖೆಗಳಿಗೆ ಸಲ್ಲಿಸುವ  ಅರ್ಜಿಗಳನ್ನು ನೇರವಾಗಿ ನಿಮ್ಮ ಅಹವಾಲುಗಳನ್ನು ಸ್ವೀಕರಿಸಿ 10 ದಿನಗಳ ಒಳಗೆ ವಿಲೇವಾರಿ ಮಾಡಿ ಕೊಡಲಾಗುವುದ ಎಂದರು. ಕಡಂದಲೆಯ ಬಿ.ಸಿ.ಎಂ.ಹಾಸ್ಟೆಲ್ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಚಾರಿಸಿ ಉತ್ತಮ ರೀತಿಯಲ್ಲಿ ಹಾಸ್ಟೆಲ್ ನಡೆಯುತ್ತಿರುವುದರ ಬಗ್ಗೆ ಗಮನಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಹಾಸ್ಟೆಲ್ಗಳಲ್ಲಿ ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ಮಾಡಲು ರೂ. 2ಲಕ್ಷದಷ್ಟು ಅನುದಾನ ನೀಡಲು ಅವಕಾಶವಿದ್ದು ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ಹಾಸ್ಟೆಲ್ನ ವಾರ್ಡನ್ ಅರುಣ್ ಕುಮಾರ್ ಅವರಿಗೆ ಸೂಚಿಸಿದ ಅವರು

ಹಾಗೂ ಅಂಗನವಾಡಿ ಕೇಂದ್ರಗಳಿಗೂ 2 ಲಕ್ಷದಷ್ಟು ಅನುದಾನವನ್ನು ಒದಗಿಸಲಾಗುವುದು ಎಂದರು. 
15 ವರ್ಷದ ನಂತರದ ಮಕ್ಕಳು ಹಾಗೂ 60 ವಯಸ್ಸಿನ ಹಿರಿಯ ನಾಗರಿಕರಿಗೆ ಆದಷ್ಟು ಬೇಗ ವ್ಯಾಕ್ಸಿನೇಷನ್ ತೆಗೆದುಕೊಳ್ಳಿ , ಕೊರೋನಾ  ಇನ್ನೂ ಸಂಪೂರ್ಣವಾಗಿ ಹೋಗಿಲ್ಲ ಅದಕ್ಕಾಗಿ ಈ ರೋಗದ ಬಗ್ಗೆ ಅಸಡ್ಡೆಯನ್ನು ತೋರದೇ ಜಾಗ್ರತೆ ವಹಿಸಿ  ಎಂದರು.
ಯಾವುದೇ ಹಳೆಯ ಅರ್ಜಿಗಳು, ಕಡತಗಳಿದ್ದಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು 10 ದಿನಗಳ ಒಳಗಾಗಿ ವಿಲೇವಾರಿ  ಕಾರ್ಯವನ್ನು ಮಾಡಬೇಕು ಎಂದು ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 
ಹಲವಾರು ಜನರು ಸಮಸ್ಯೆಗಳ  ಮಧ್ಯೆ ಸಿಲುಕದೆ ಕಛೇರಿಗಳಿಗೆ ಅಲೆದಾಡುವಂತಾಗಬಾರದೆಂಬ  ಉದ್ದೇಶದಿಂದ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ " ಈ ಗ್ರಾಮ ವಾಸ್ತವ್ಯವನ್ನು ನೇರವಾಗಿ ಜನರ ಅಹವಾಲುಗಳನ್ನು ಸ್ವೀಕರಿಸಲು ನೀವಿದ್ದಲ್ಲಿಗೆ  ಆಗಮಿಸಿ ಅರ್ಜಿ ದಾರರ ಎಲ್ಲಾ ಸಮಸ್ಯೆಗಳ ಕುರಿತು ಮುಕ್ತವಾಗಿ ಜಿಲ್ಲಾಧಿಕಾರಿಗಳಲ್ಲಿ ತಮ್ಮ ಅಹವಾಲು ಪತ್ರವನ್ನು ಸಲ್ಲಿಸಬಹುದು  ಹಾಗೂ ಮೂಡುಬಿದಿರೆ ತಾಲೂಕಿನಾದ್ಯಾಂತ ಮಳೆ ಹಾನಿಯಲ್ಲಿ ಆದ ನಷ್ಟಕ್ಕೆ ಜಿಲ್ಲಾಡಳಿತದಿಂದ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು ಶಾಸಕ ಉಮಾನಾಥ್ ಕೋಟ್ಯಾನ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. 
  ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಸ.ಕಮೀಷನರ್ ಮದನ್ಮೋಹನ್, ಡಿಡಿಎಲ್ಆರ್ ನಿರಂಜನ್, ಪಾಲಡ್ಕ ಗ್ರಾ.ಪಂ ಅಧ್ಯಕ್ಷ ದಿನೇಶ್.ಕೆ.ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ತಹಶೀಲ್ದಾರ್ ಪುಟ್ಟರಾಜು ಉಪಸಿತ್ಥರಿದ್ದರು.

Post a Comment

0 Comments