ನಿವೇಶನ ಜಾಗ, ಪರಿಶಿಷ್ಟ ಜಾತಿ- ಪಂಗಡ ಕಾಲನಿಗೆ ಭೇಟಿ, ಪರಿಶೀಲನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ದ.ಕ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವುಗಳ ಜಂಟಿ ಆಶ್ರಯದಲ್ಲಿ ಜಿಲ್ಲಾಧಿಕಾರಿ ಡಾ/ಕೆ.ವಿ.ರಾಜೇಂದ್ರ ಅವರು ಶನಿವಾರ ಮೂಡುಬಿದಿರೆ ತಾಲೂಕಿನ ಪಾಲಡ್ಕ, ಕಡಂದಲೆ ಗ್ರಾ.ಪಂ.ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಗಳಿಗೆ, ಬಿ.ಸಿ.ಎಂ. ಹಾಸ್ಟೆಲ್ಗೆ ಹಾಗೂ ನಿವೇಶನದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಿಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೇ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಡಂದಲೆಯ ಗುತ್ತ ಪರಿಶಿಷ್ಟ ಕಾಲನಿಯಲ್ಲಿ ರುಕ್ಕ ಅವರ ಮನೆಯ ಆರ್ಟಿಸಿ ಸಮಸ್ಯೆಯನ್ನು ಬಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಅಲ್ಲದೆ ರೇಶನ್ , ಆಧಾರ್  ಕಾರ್ಡ್ಸ   ಸಮಸ್ಯೆ  ಇದೆಯೇ ಎಂದು ಪ್ರಶ್ನಿಸಿದ್ದಾರಲ್ಲಿ ೩ನೇ ಹಂತದ ವ್ಯಾಕ್ಸಿನ್ ತೆಗೆದುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು. ೨ನೇ ಹಂತದ ವ್ಯಾಕ್ಸಿನ್ ಇತ್ತೀಚೆಗೆ ತೆಗೆದುಕೊಂಡಿರುವುದರಿಂದ ೩ನೇ ಹಂತದ ವ್ಯಾಕ್ಸಿನ್ಗೆ ಇನ್ನೂ ಸಮಯವಿದೆ ಎಂದರು. ಅಲ್ಲಿಯೇ ಇನ್ನೋರ್ವ  ಬಾಬು ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು. 




ಯಾವುದೇ ಸಮಸ್ಯೆಯನ್ನು ಹೇಳದ ಬಾಬು ಅವರು ಬೀದಿ ನಾಯಿಗಳನ್ನು ಸಾಕುತ್ತಿರುವುದರ ಬಗ್ಗೆ ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಉತ್ತಮ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ನಂತರ ಕಡಂದಲೆಯ ಕಾಂಗೂರಿ ಕೊರಗರ ಕಾಲನಿಗೆ ಭೇಟಿ ನೀಡಿ ಅಲ್ಲಿ ಅಂತು ಮತ್ತು ಬುಟ್ಟಿ ಹೆಣೆಯುತ್ತಿರುವ ರಾಜು ಅವರನ್ನು ಭೇಟಿ ಮಾಡಿ ಮಾತನಾಡಿದರು. ಕೇಮಾರು ಕೊರಗರ ಕಾಲನಿಯಲ್ಲಿ ಜಾಗ ಮೀಸಲಿಡಲಾಗಿದ್ದು ಅಲ್ಲಿಗೆ ಯಾಕೆ ಹೋಗುವುದಿಲ್ಲವೆಂದು ಅಂತು ಅವರಲ್ಲಿ ಪ್ರಶ್ನಿಸಿದಾಗ, ಅದು ಹೆಂಡತಿಯ ಜಾಗ ಅಲ್ಲಿ ತೋರಿಸಿದ್ದು ಮಾತ್ರ ಅಳತೆ ಮಾಡಿ ನೀಡಿಲ್ಲವೆಂದು ತಿಳಿಸಿದರು. ತಕ್ಷಣವೇ ಜಾಗ ಅಳತೆ ಮಾಡಿ ನೀಡುವಂತೆ ಗ್ರಾಮಕರಣಿಕರಿಗೆ ತಿಳಿಸಿದರು.

 ಬುಟ್ಟಿ ಹೆಣೆಯುತ್ತಿದ್ದ ರಾಜು ಅವರಲ್ಲಿ ಕಸುಬಿನ ಬಗ್ಗೆ ಮಾತನಾಡಿದರು ಹಾಗೂ ತನಗೊಂದು ಬುಟ್ಟಿ ಹೆಣೆದು ಕಳುಹಿಸಿಕೊಂಡುವಂತೆ ತಿಳಿಸಿದರು.


 ಮೊದಲಿಗೆ  ಕಡಂದಲೆಯ ಬಿ.ಸಿ.ಎಂ.ಹಾಸ್ಟೆಲ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ಅಲ್ಲಿನ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಚಾರಿಸಿದರು. ಉತ್ತಮ ರೀತಿಯಲ್ಲಿ ಹಾಸ್ಟೆಲ್ ನಡೆಯುತ್ತಿರುವುದರ ಬಗ್ಗೆ ಗಮನಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಹಾಸ್ಟೆಲ್ಗಳಲ್ಲಿ ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ಮಾಡಲು ರೂ. ೨ ಲಕ್ಷದಷ್ಟು ಅನುದಾನ ನೀಡಲು ಅವಕಾಶವಿದ್ದು ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ಹಾಸ್ಟೆಲ್ನ ವಾರ್ಡನ್ ಅರುಣ್ ಕುಮಾರ್ ಅವರಿಗೆ ಸೂಚಿಸಿದರು.  ಪೂಪಾಡಿಕಲ್ಲಿನಲ್ಲಿರುವ ೧೮ ಎಕರೆ ಸರಕಾರಿ ಜಾಗದಲ್ಲಿ ೧೦ ಎಕ್ರೆ ಜಾಗವನ್ನು ನಿವೇಶನಕ್ಕಾಗಿ ಮೀಸಲಿಟ್ಟು ಅದರಲ್ಲಿಯೆ ೨ ಎಕ್ರೆ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಾಯ್ದಿರಿಸಬೇಕು. ಅಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಬೆಳೆಸಿರುವ ಮರಗಳನ್ನು ಉಳಿಸಿಕೊಂಡು ರಸ್ತೆ, ಉದ್ಯಾನವನ ಮೊದಲಾದ ಮೂಲಭೂತ ಸೌರ‍್ಯಗಳೊಂದಿಗೆ ಮನೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್, ಸ.ಕಮೀಷನರ್ ಮದನ್ಮೋಹನ್, ಡಿಡಿಎಲ್ಆರ್ ನಿರಂಜನ್, ಪಾಲಡ್ಕ ಗ್ರಾ.ಪಂ ಅಧ್ಯಕ್ಷ ದಿನೇಶ್.ಕೆ.ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ತಹಶೀಲ್ದಾರ್ ಪುಟ್ಟರಾಜು ಉಪಸಿತ್ಥರಿದ್ದರು.


Post a Comment

0 Comments