ಧರ್ಮಸ್ಥಳದ ಪರ ಕಟೀಲು ದೇಗುಲದಲ್ಲಿ ಪಾದಯಾತ್ರೆ:ನಳಿನ್ ಕುಮಾರ್ ಕಟೀಲು ನೇತೃತ್ವ
ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಷಡ್ಯಂತ್ರದ ವಿರುದ್ಧ ಧರ್ಮ ಜಾಗೃತಿ ಸಭೆಯ ಮೊದಲ ಪೂರ್ವಭಾವಿ ಸಭೆ,ಊರಿನ ಪ್ರಮುಖರು ಹಾಗೂ ಆಸ್ರಣ್ಣ ಬಂಧುಗಳ ಸಮ್ಮುಖದಲ್ಲಿ ಕಟೀಲು ಸರಸ್ವತಿ ಸದನದಲ್ಲಿ ನಡೆದಿದ್ದು ಮಾಜಿ ಸಂಸದರು ಹಾಗೂ ಮಾಜಿ ಬಿಜೆಪಿ ರಾಜ್ಯಾಧ್ಯಾಕ್ಷರಾದ ನಳಿನ್ ಕುಮಾರ್ ಕಟೀಲುರವರ ನೇತೃತ್ವದಲ್ಲಿ ನಡೆಯಿತು.
ಈ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ 31-08-2025,ಭಾನುವಾರ ಸಂಜೆ 3.00ಗಂಟೆಗೆ, ಕಟೀಲು ಪ್ರಥಮ ದರ್ಜೆ ಕಾಲೇಜ್ ನಲ್ಲಿ ಇಡಿ ಹಿಂದೂ ಸಮಾಜದ ಆಸ್ತಿಕ ಭಕ್ತರೊಂದಿಗೆ ಪಾದಯಾತ್ರೆಯ ಮೂಲಕ, ಕಟೀಲು ರಥಬೀದಿಯಲ್ಲಿ ಧರ್ಮ ಜಾಗೃತಿ ಸಭೆ ನಡೆಸುದುವುದೆಂದು ನಿರ್ಧರಿಸಲಾಯಿತು.
0 Comments