ಗಾಂಧಿನಗರ ಶಾಲೆಗೆ ಗ್ಯಾರೇಜ್ ಮಾಲಕ ಸಂಘದಿಂದ ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment

 ಗಾಂಧಿನಗರ ಶಾಲೆಗೆ ಗ್ಯಾರೇಜ್ ಮಾಲಕ ಸಂಘದಿಂದ ಕೊಡುಗೆ 


ಮೂಡುಬಿದಿರೆ: ಮೂಡುಬಿದಿರೆ ವಲಯ ಗ್ಯಾರೇಜ್ ಮಾಲಕ ಸಂಘದಿAದ ಗಾಂಧಿನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 40 ಕುರ್ಚಿಗಳನ್ನು ನೀಡಲಾಯಿತು. 

ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಗ್ಯಾರೇಜ್ ಮಾಲಕರ ತಮ್ಮ ವೃತ್ತಿ ಬದುಕಿನ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಅದರ ಅಂಗವಾಗಿ ಗಾಂಧಿನಗರ ಶಾಲೆಗೆ ಕೊಡುಗೆಯನ್ನು ನೀಡಿದ್ದೇವೆ ಎಂದರು. 

ಸಂಘದ ಕೋಶಾಧಿಕಾರಿ ಶಂಕರ್ ಕೋಟ್ಯಾನ್ ಮಾತನಾಡಿ, ಸಾಮಾಜಿಕ ಕಾಳಜಿಯ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಸಂಘದಿಂದ ಹಮ್ಮಿಕೊಂಡಿದ್ದೇವೆ ಎಂದರು. 

ಸರ್ಕಾರದಿಂದ ಕೊಡಮಾಡಿದ ಶೂ-ಸಾಕ್ಸ್ ಗಳನ್ನು ಪುರಸಭೆ ಸದಸ್ಯೆ ದಿವ್ಯಾ ಜಗದೀಶ್ ವಿದ್ಯಾರ್ಥಿಗಳಿಗೆ ವಿತರಿಸಿದರು. 

ಎಸ್‌ಡಿಎಂಸಿ ಉಪಾಧ್ಯಕ್ಷ ಯಶೋಧರ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರಮಿಕ ವರ್ಗದವರ ಗ್ಯಾರೇಜ್ ಮಾಲಕರು ತಮ್ಮ ದುಡಿಮೆಯಲ್ಲಿ ಉಳಿಸಿದ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ. ಅವರ ಈ ಪ್ರಯತ್ನಗಳು ವ್ಯರ್ಥವಾಗಬಾರದು. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆ ಉಳಿಸುವುದು ಮಾತ್ರವಲ್ಲ, ದಾನಿಗಳ ನೆರವುಗಳನ್ನು ಸಾರ್ಥಕಗೊಳಿಸಬೇಕು ಎಂದರು. 

ಸಂಘದ ಉಪಾಧ್ಯಕ್ಷ ನಿತ್ಯಾನಂದ ಸಾಲ್ಯಾನ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಅಮೀನ್ ಹಾಗೂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಶೆಟ್ಟಿ, ಸದಸ್ಯರು, ಮುಖ್ಯ ಶಿಕ್ಷಕಿ ಕಸ್ತೂರಿ ಎಚ್., ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ, ಅಕ್ಷತಾ ಉಪಸ್ಥಿತರಿದ್ದರು.

Post a Comment

0 Comments