ಶ್ರೀ ಮಹಾವೀರ ಪ. ಪೂ ಕಾಲೇಜಿನಲ್ಲಿ
ಮೂಡುಬಿದಿರೆ: ಶ್ರೀ ಮಹಾವೀರ ಪದವಿಪೂರ್ವ
ಕಾಲೇಜಿನ ಎನ್.ಎಸ್.ಎಸ್. ವಿಭಾಗ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಜಂಟಿ ಆಶ್ರಯದಲ್ಲಿ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮವು ಮಂಗಳವಾರ ನಡೆಯಿತು.
ಎ.ಜೆ.ಸೋನ್ಸ್ ಐ.ಟಿ.ಐ.ಯ ಪ್ರಾಂಶುಪಾಲ, ಲಯನ್ಸ್ ಜಿಲ್ಲೆ 317 ಡಿಯ ರಸ್ತೆ ಸುರಕ್ಷತೆ ಅಭಿಯಾನ ಕಾರ್ಯಕ್ರಮದ ಸಂಯೋಜಕ ಲ. ಶಿವಪ್ರಸಾದ್ ಹೆಗ್ಡೆ ಕಣಂಜಾರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ "ಮಿತಿಮೀರಿದ ವೇಗ ಮತ್ತು ಅತಿಯಾದ ಆತ್ಮವಿಶ್ವಾಸದ ಧಾವಂತ ಹಲವಾರು ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣವಾಗಿದ್ದು ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ವಾಹನ ಚಲಾಯಿಸಿದರೆ ಸುರಕ್ಷಿತವಾಗಿ ಸ್ಥಳಕ್ಕೆ ತಲುಪುವ ಜೊತೆಗೆ ಕಾನೂನಿನ ದಂಡನೆಗೆ ಒಳಪಡುವುದು ತಪ್ಪುತ್ತದೆ ಎಂದರು. ರಸ್ತೆ ಅಪಘಾತಗಳ ಹಲವು ವೀಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸಿ ಅಗತ್ಯ ಮಾಹಿತಿ ನೀಡಿದರು.
ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ, ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಡೇನಿಸ್ ಪಿರೇರಾ, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ, ನಿಕಟಪೂರ್ವ ಕಾರ್ಯದರ್ಶಿ ಭರತ್ ಕುಮಾರ್ ಶೆಟ್ಟಿ, ಎನ್.ಎಸ್.ಎಸ್. ಅಧಿಕಾರಿಗಳಾದ ಆಶಿತಾ, ಚಿತ್ರಲೇಖಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಮೋಕ್ಷ್ ಮತ್ತು ಮೋನಿಕಾ ಉಪಸ್ಥಿತರಿದ್ದರು.
ಪ್ರೀತಿ ಅತಿಥಿಗಳನ್ನು ಪರಿಚಯಿಸಿದರು.
ಶ್ರಾವ್ಯ ನಿರೂಪಿಸಿ, ವೈಷ್ಣವಿ ಸ್ವಾಗತಿಸಿ, ಭವ್ಯ ವಂದಿಸಿದರು.

0 Comments