*ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ರೋಟರಿ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ*
ಮೂಡುಬಿದಿರೆ: ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾದ ಪ್ರಾಂತ್ಯ ಶಾಲೆಯಲ್ಲಿ ನಡೆದ ಜ್ಯೋತಿನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ದಾಖಲಿಸಿ *ಕಿರಿಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ - ಪ್ರಾಂತ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಮ್ಮ ಬಹುಮುಖ ಪ್ರತಿಭೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
*ಪ್ರಾಥಮಿಕ ಹಾಗೂ ಪ್ರೌಢ ವಿಭಾಗಗಳಲ್ಲಿ ಸ್ಪರ್ಧಾರ್ಥಿಗಳು ಒಟ್ಟು 31 ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ *
*ಕಿರಿಯ ಪ್ರಾಥಮಿಕ ವಿಭಾಗ ದಲ್ಲಿ 5 ಪ್ರಥಮ, 3 ದ್ವಿತೀಯ ಬಹುಮಾನಗಳು*.
*ಹಿರಿಯ ಪ್ರಾಥಮಿಕ ವಿಭಾಗದಲ್ಲಿ 6 ಪ್ರಥಮ, 1 ದ್ವಿತೀಯ ಹಾಗೂ 4 ತೃತೀಯ ಬಹುಮಾನಗಳು*
*ಪ್ರೌಢಶಾಲಾ ವಿಭಾಗದಲ್ಲಿ 6 ಪ್ರಥಮ, 3 ದ್ವಿತೀಯ ಹಾಗೂ 3 ತೃತೀಯ ಬಹುಮಾನಗಳು*
*ಈ ಮೂಲಕ ಶಾಲೆಯ ವಿದ್ಯಾರ್ಥಿಗಳು ಒಟ್ಟು 17 ಪ್ರಥಮ, 7 ದ್ವಿತೀಯ ಹಾಗೂ 10 ತೃತೀಯ ಬಹುಮಾನಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಹಾಗೂ ಒಟ್ಟು 17 ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.*
*ಕಿರಿಯ ಪ್ರಾಥಮಿಕ ವಿಭಾಗ*
*ಪ್ರಥಮ ಸ್ಥಾನ*
ಇಂಗ್ಲಿಷ್ ಕಂಠಪಾಠ – ರಿಯಾನ್ ಜಾಝೀಲ್ ಕುಟ್ಟಿನ್ಹ
ಛದ್ಮವೇಷ – ಪ್ರೇಕ್ಷ ಶೆಟ್ಟಿ
ಕಥೆ ಹೇಳುವುದು – ಪ್ರದ್ಯುಮ್ನ ಪಿ. ಕಲ್ಲೂರಾಯ
ದೇಶಭಕ್ತಿ ಗೀತೆ – ಆಪ್ತಿ ಶೆಟ್ಟಿ
ಕ್ಲೇ ಮಾಡೆಲಿಂಗ್ – ಆರ್ಯನ್ ಎಲ್. ಸಾಲಿಯಾನ್
*ದ್ವಿತೀಯ ಸ್ಥಾನ*
ಆಶುಭಾಷಣ – ಅಕುಲ್ ಮಹೇಶ್ ಮಂಗಜ್
ಭಕ್ತಿ ಗೀತೆ – ಶರಣ್ಯ ಬೆಳ್ಳಿರಾಯ
ಚಿತ್ರಕಲೆ – ಅಥರ್ವ ಪಿ. ಕೋಟ್ಯಾನ್
*ಹಿರಿಯ ಪ್ರಾಥಮಿಕ ವಿಭಾಗ*
*ಪ್ರಥಮ ಸ್ಥಾನಗಳು*
ಶ್ರೀಜಾ ಆರ್. ಅಂಚನ್ (ಕನ್ನಡ ಕಂಠಪಾಠ)
ಸಫಾ ಫಾತಿಮಾ (ಧಾರ್ಮಿಕ ಪಠಣ – ಅರೇಬಿಕ್)
ಶಿವಂ (ಮಿಮಿಕ್ರಿ)
ವೃತ್ತಿ (ಅಭಿನಯ ಗೀತೆ)
ರಿಯಾ ಪೂಜಾರಿ (ಚಿತ್ರಕಲೆ)
ಶ್ರೀಜಾ ಆರ್. ಅಂಚನ್ (ಕಥೆ ಹೇಳುವುದು)
*ದ್ವಿತೀಯ ಸ್ಥಾನಗಳು*
ಗಾನವಿ (ಭಕ್ತಿಗೀತೆ)
*ತೃತೀಯ ಸ್ಥಾನಗಳು*
ಕೆ. ಲಾವಣ್ಯ ಕಾಮತ್ (ಧಾರ್ಮಿಕ ಪಠಣ – ಸಂಸ್ಕೃತ)
ಗಾನವಿ (ದೇಶಭಕ್ತಿಗೀತೆ)
ಪ್ರತ್ಯುಷ್ (ಕ್ಲೇ ಮಾಡೆಲಿಂಗ್)
ಭಾನ್ವಿ ಎಸ್. (ಆಶುಭಾಷಣ)
*ಪ್ರೌಢಶಾಲಾ ವಿಭಾಗ*
*ಪ್ರಥಮ ಸ್ಥಾನಗಳು*
ವೆಲೋನಿ ಕಾರ್ಡೋಜಾ 10ನೇ ತರಗತಿ - ಹಿಂದಿ ಭಾಷಣ
ಹಂಸಿಕಾ 9ನೇ ತರಗತಿ - ಜನಪದ ಗೀತೆ
ರೆನಿಷಾ ಮನೋಳ ಡಿಸೋಜಾ 10ನೇ ತರಗತಿ - ಪ್ರಬಂಧ ಬರವಣಿಗೆ
*ದ್ವಿತೀಯ ಸ್ಥಾನಗಳು*
ನಂದನಾ ಪ್ರಭು ಮತ್ತು ರಂಜನಾ ಬೈದಬೆಟ್ಟು ಪೈ 9ನೇ ತರಗತಿ - ರಸಪ್ರಶ್ನೆ
ಸಿದ್ಧಾರ್ಥ್ 10ನೇ ತರಗತಿ - ಇಂಗ್ಲಿಷ್ ಭಾಷಣ
ಸಾನ್ವಿ 10ನೇ ತರಗತಿ - ರಂಗೋಲಿ
*ತೃತೀಯ ಸ್ಥಾನಗಳು*
ಸರ್ವಾಣಿ ಎಸ್– 8ನೇ ತರಗತಿ - ಭಾವಗೀತೆ
ದಿಶಾ ಪ್ರದೀಪ್ ದೇವಾಡಿಗ 8ನೇ ತರಗತಿ - ಕವನ ವಾಚನ
ಆದ್ಯಾ 8ನೇ ತರಗತಿ - ಗಜಲ್
ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಸಂಚಾಲಕರು , ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ ಶುಭ ಹಾರೈಸಿದ್ದಾರೆ

0 Comments