ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾಂತ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜ್ಯೋತಿನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಹಿರಿಯ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪ್ರತ್ಯೇಕ ಸ್ಪರ್ಧೆಗಳಲ್ಲಿ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು ಒಟ್ಟು 10 ಪ್ರಥಮ, 5 ದ್ವಿತೀಯ ಹಾಗೂ 5 ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡು ಶಾಲೆಗೆ ಕೀರ್ತಿ ತಂದಿರುತ್ತಾರೆ. ಈ ಮೂಲಕ ಶಾಲೆಯ ಒಟ್ಟು ಹನ್ನೊಂದು ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಪ್ರೌಢಶಾಲಾ ವಿಭಾಗ :
ಪ್ರಥಮ ಸ್ಥಾನಿಗಳು – ಅಭಿಜ್ಞಾ ಭಟ್ (ಸಂಸ್ಕೃತ ಧಾರ್ಮಿಕ ಪಠಣ), ಮೊಹಮ್ಮದ್ ಹನನ್ ಅಸೀಬ್ (ಅರೇಬಿಕ್ ಧಾರ್ಮಿಕ ಪಠಣ),ಮಾನಿತ ಉಡುಪ ವೈ (ಆಂಗ್ಲ ಭಾಷಣ), ಆಯುಷ್ (ಗಝಲ್), ಧ್ಯಾನ್ ಜೈನ್ (ಚರ್ಚಾ ಸ್ಪರ್ಧೆ), ಶ್ರೇಯ ಹೆಗ್ಡೆ (ಕವನ ವಾಚನ), ಆರುಷ್, ಷಣ್ಮುಖ ( ಗುಂಪು ವಿಭಾಗದ ರಸಪ್ರಶ್ನೆ) ಮತ್ತು ರಾಮಚಂದ್ರ ಎಸ್ ಪೈ (ಸಂಸ್ಕೃತ ಭಾಷಣ)
ದ್ವಿತೀಯ ಸ್ಥಾನಿಗಳು – ತೃಪ್ತಿ ಪೂಜಾರಿ (ಕನ್ನಡ ಭಾಷಣ), ಅನುಷಾ ಕದ್ರೂಳಿ (ಹಿಂದಿ ಭಾಷಣ), ಸರ್ವದಾ ಕೆ ಎಸ್ (ಭಾವಗೀತೆ) ಮತ್ತು ಮಾನಸ (ಪ್ರಬಂಧ ರಚನೆ)
ತೃತೀಯಾ ಸ್ಥಾನಿಗಳು – ಗಗನದೀಪ (ರಂಗೋಲಿ), ತ್ರಿಶೂಲ್ ಪಿ ಹೆಗ್ಡೆ (ಮಿಮಿಕ್ರಿ), ಶ್ರೇನ್ಯ ಜೆ ಎಸ್ (ಜಾನಪದ ಗೀತೆ) ಮತ್ತು ಬೃಂದಶ್ರೀ ಎಚ್ ಆರ್ (ಆಶುಭಾಷಣ)
ಹಿರಿಯ ಪ್ರಾಥಮಿಕ ಶಾಲಾ ವಿಭಾಗ :
ಪ್ರಥಮ ಸ್ಥಾನಿಗಳು – ನಿತಿನ್ (ಕ್ಲೇ ಮಾಡೆಲಿಂಗ್) ಮತ್ತು ಕರುಣೇಶ್ ಹಿರೇಮಠ್ (ದೇಶಭಕ್ತಿ ಗೀತೆ)
ದ್ವಿತೀಯ ಸ್ಥಾನಿಗಳು – ಪೂರ್ವಿ ಆರ್ ( ಸಂಸ್ಕೃತ ಧಾರ್ಮಿಕ ಪಠಣ)
ತೃತೀಯಾ ಸ್ಥಾನಿಗಳು – ಅಬ್ದುಲ್ ಮುಯೀಜ್ (ಅರೇಬಿಕ್ ಧಾರ್ಮಿಕ ಪಠಣ)
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಶ್ರೀ ಯುವರಾಜ್ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ.ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕ ಶ್ರೀ ಪುಷ್ಪರಾಜ್ ಜೈನ್, ಮುಖ್ಯಶಿಕ್ಷಕ ಶ್ರೀ ಶಿವಪ್ರಸಾದ್ ಭಟ್ ಮತ್ತು ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿ, ಶುಭ ಹಾರೈಸಿದರು.

0 Comments