ದೀಪಾವಳಿ ಆಚರಣೆಯು ಜಗತ್ತಿನಲ್ಲಿ ಶಾಂತಿ ನೆಲೆಸುವಂತ್ತಾಗಲಿ : ವಕೀಲ ಶರತ್ ಡಿ. ಶೆಟ್ಟಿ

ದೀಪಾವಳಿ ಆಚರಣೆಯು ಜಗತ್ತಿನಲ್ಲಿ ಶಾಂತಿ ನೆಲೆಸುವಂತ್ತಾಗಲಿ : ವಕೀಲ ಶರತ್ ಡಿ. ಶೆಟ್ಟಿ
ಮೂಡುಬಿದಿರೆ : ಇಡೀ ವಿಶ್ವವೇ ಒಂದು ಕುಟುಂಬ ಎಂದು ಸಾರಿದ ಕೀರ್ತಿ ನಮ್ಮ ರಾಷ್ಟ್ರಕ್ಕಿದೆ. ವಿಶ್ವ ಕಲ್ಯಾಣದ ಭಾವನೆ ನಮ್ಮ ಸಂಸ್ಕೃತಿಯ  ಪರಂಪರೆಯಾಗಿದ್ದು ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಮೂಡುಬಿದಿರೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಶರತ್ ಡಿ. ಶೆಟ್ಟಿ ಶುಭ ಹಾರೈಸಿದರು.
ಅವರು ಸಮಾಜ ಮಂದಿರ  ಸಭಾ (ರಿ)ಮೂಡುಬಿದಿರೆ ಮತ್ತು ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮೂಡುಬಿದಿರೆ ಘಟಕದ  ಜಂಟಿ ಆಶ್ರಯದಲ್ಲಿ ಶನಿವಾರ ಸಮಾಜ ಮಂದಿರದಲ್ಲಿ ನಡೆದ ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪಧೆ೯ಯ   ಸಮಾರೋಪ ಸಮಾರಂಭದ ಸಭಾ ಕಾಯ೯ಕ್ರಮ ಮತ್ತು ಬಹುಮಾನ ವಿತರಣೆ ಕಾಯ೯ಕ್ರಮದಲ್ಲಿ ದೀಪಾವಳಿಯ ಸಂದೇಶವನ್ನು ನೀಡಿದರು.  

ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜ ಮಂದಿರವು ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬರುತ್ತಿದೆ. ಅದರಂತೆ ಯುವವಾಹಿನಿ ಘಟಕವೂ ಉತ್ತಮ ಚಿಂತನೆಗಳನ್ನು ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.

 ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ನೋಟರಿ, ವಕೀಲೆ ಶ್ವೇತಾ ಜೈ ನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ. ನಮ್ಮೊಳಗಿನ ಅಜ್ಞಾನ, ಅಹಂಕಾರ ಮತ್ತು ಕೆಟ್ಟ ಅಲೋಚನೆಗಳನ್ನು ದೂರಮಾಡಿ ಒಳ್ಳೆಯತನದ ಬೆಳಕನ್ನು ಬೆಳಗಿಸುವ ಹಬ್ಬ ಎಂದರು. 

ಸನ್ಮಾನ : ಎಂಡಿಬಿ ಲೈವ್ ನ ಮಾಲಕ ರಾಘವೇಂದ್ರ  ಮೂಡುಬಿದಿರೆ ಅವರನ್ನು ಸನ್ಮಾನಿಸಲಾಯಿತು. 

  ನೈಜಿ ವಲ್ಡ್ ಮೂಡುಬಿದಿರೆ ಇದರ ವ್ಯವಸ್ಥಾಪಕ ನಿದೇ೯ಶಕ ಅಬೂಬಕರ್ ಸಿದ್ದಿಕ್ ಹಾಜಿ, ವೆಲ್ ನೆಸ್ ಕೋಚ್ ನ ಜಾನ್ ಡಿ'ಸೋಜ ಬೆಳುವಾಯಿ, ಪವರ್ ಫ್ರೆಂಡ್ಸ್ ಬೆದ್ರದ ಹರೀಶ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 
ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾಯ೯ದಶಿ೯ ಶುಭಕರ ಪೂಜಾರಿ ಸಾವ್ಯ ಉಪಸ್ಥಿತರಿದ್ದರು.
 ಸಮಾಜ ಮಂದಿರ ಸಭಾದ ಜೊತೆ ಕಾಯ೯ದಶಿ೯ ಎಂ. ಗಣೇಶ್ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 
ಯುವವಾಹಿನಿಯ ದಯಾನಂದ್ ಕಾಯ೯ಕ್ರಮ ನಿರೂಪಿಸಿದರು. ಯುವವಾಹಿನಿ ತಾಲೂಕು  ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ವಂದಿಸಿದರು.

Post a Comment

0 Comments

Advertisement