ಜೈನ ಸಮಾಜ ಹಾಗೂ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕರ್ನಾಟಕ ಸರಕಾರದ ಮಾನ್ಯ ಸಹಕಾರ ಸಚಿವರಾದ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ ಯವರು ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಜೈನ್ ಸಮಾಜದ ಮಿಲನ್ ಉಪಾಧ್ಯಕ್ಷರಾದ ಶ್ರೀ ಸುದರ್ಶನ್ ಜೈನ್ ಹಾಗೂ ಇನ್ನಿತರ ಪ್ರಮುಖರು ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದರು.
ಇಂದು ಸಹಕಾರ ಸಪ್ತಾಹ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿರುವ ಸಹಕಾರ ಸಚಿವರಾದ ಶ್ರೀ ಸವದಿಯವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೂತನವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಸಹಕಾರ ವಿಭಾಗದ ಅಧ್ಯಕ್ಷರಾದ ಶ್ರೀ ಸುದರ್ಶನ್ ಜೈನ್, ಮಾಜಿ ಸಚಿವರಾದ ಸನ್ಮಾನ್ಯ ರಮನಾಥ ರೈ , ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮರಾಜ್ ಆರ್ ಪೂಜಾರಿಯವರು ಮತ್ತು ಮೆಸ್ಕಾಂ ಮಂಗಳೂರು ಇದರ ಅಧ್ಯಕ್ಷರಾದ ಹರೀಶ್ ಕುಮಾರ್ ರವರು ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ಸಹಕಾರ ಸಂಘಟನೆಯ ಬಗ್ಗೆ ಮತ್ತು ಕಾಂಗ್ರೆಸಿಗೆ ಜೈನ ಮುನಿಗಳ ಕೊಡುಗೆ ಹಾಗೂ ಜೈನ ಅಭಿವೃದ್ಧಿ ನಿಗಮದ ಅನುಷ್ಠಾನದ ಬಗ್ಗೆ ಪ್ರಸ್ತಾಪಿಸಿದರು.
ಆದಷ್ಟು ಬೇಗ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ ಭರವಸೆ ನೀಡಿದ ಸಚಿವರು ಇದಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಜೈನ ಸಮಾಜದ ಹಾಗೂ ಧವಳ ಕೋ-ಆಪರೇಟಿವ್ ಸೊಸೈಟಿನ ಪದಾಧಿಕಾರಿಗಳು ಶ್ರೀ ಸುದರ್ಶನ್ ಜೈನ್ ಇವರ ನೇತೃತ್ವದಲ್ಲಿ ಭೇಟಿಯಾಗಿ ಗೌರವಾರ್ಪಣೆ ಮಾಡುವುದರೊಂದಿಗೆ ಜೈನ ಸಮುದಾಯಕ್ಕೆ ಸಿಗಬೇಕಾದ ನಿಗಮ, ವಿವಿಧ ಹುದ್ದೆಗಳ ಪ್ರಾತಿನಿಧ್ಯ, ಪ್ರತ್ಯೇಕ ಸಸ್ಯಹಾರಿ ವಿದ್ಯಾರ್ಥಿ ನಿಲಯ ಹಾಗೂ ಅಲ್ಪಸಂಖ್ಯಾತ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಶೀಘ್ರ ಮಂಜೂರಾತಿಗಾಗಿ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಗಳೂರಿನ ನ್ಯಾಯವಾದಿ ಶ್ರೀ ಜಿನೇಂದ್ರ ಕುಮಾರ್ ಬಿ, ದ.ಕ ವರ್ತಕರ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಜೈನ್ ಹಾಗೂ ಪ್ರಮುಖರಾದ ಶ್ರೀ ಪ್ರಮೋದ್ ಕುಮಾರ್ , ಶ್ರೀ ನಿವೇಶ್ ಜೈನ್, ಶ್ರೀ ಶರಧಿ ಜೈನ್ ಇವರುಗಳು ಉಪಸ್ಥಿತರಿದ್ದರು.

0 Comments