ಎಕ್ಸಲೆಂಟ್ ಕಾಲೇಜಿನ ೨೨ ವಿದ್ಯಾರ್ಥಿಗಳಿಗೆ ಸಿಎಸ್ ಎಕ್ಸಿಕ್ಯೂಟಿವ್ ಪ್ರವೇಶ ಅರ್ಹತೆ

ಎಕ್ಸಲೆಂಟ್ ಕಾಲೇಜಿನ ೨೨ ವಿದ್ಯಾರ್ಥಿಗಳಿಗೆ ಸಿಎಸ್ ಎಕ್ಸಿಕ್ಯೂಟಿವ್ ಪ್ರವೇಶ ಅರ್ಹತೆ

*ಸಿಇಎಸ್‌ಇಇಟಿ ಪರೀಕ್ಷೆಯಲ್ಲಿ ಶೇ. ೮೪.೬೨ರಷ್ಟು ಫಲಿತಾಂಶ; ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಮೂಡುಬಿದಿರೆ: ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ICSI) ನಡೆಸಿದ ಕಂಪನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (CSEET) ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ೨೨ ವಿದ್ಯಾರ್ಥಿಗಳು ತೇರ್ಗಡೆಯಾಗಿ ಉನ್ನತ ಸಾಧನೆ ಮೆರೆದಿದ್ದಾರೆ.

ಪರೀಕ್ಷೆಗೆ ಹಾಜರಾದ ೨೬ ವಿದ್ಯಾರ್ಥಿಗಳ ಪೈಕಿ ೨೨ ಮಂದಿ ಉತ್ತೀರ್ಣರಾಗುವ ಮೂಲಕ ಶೇ. ೮೪.೬೨ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಈ ಸಾಧನೆಯೊಂದಿಗೆ ವಿದ್ಯಾರ್ಥಿಗಳು ಕಂಪನಿ ಸೆಕ್ರೆಟರಿ (CS) ವೃತ್ತಿಪರ ಶಿಕ್ಷಣದ ಮುಂದಿನ ಮಹತ್ವದ ಘಟ್ಟವಾದ CS Executive Programme ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ. ಪದವಿಪೂರ್ವ ಶಿಕ್ಷಣದ ಹಂತದಲ್ಲಿಯೇ ವೃತ್ತಿಪರ ಶಿಕ್ಷಣದತ್ತ ದೃಢ ಹೆಜ್ಜೆಯನ್ನಿಟ್ಟಿರುವ ವಿದ್ಯಾರ್ಥಿಗಳ ಈ ಸಾಧನೆ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಹಾಗೂ ವಾಣಿಜ್ಯ ಶಿಕ್ಷಣದ ಪರಿಣಾಮಕಾರಿ ಮಾರ್ಗದರ್ಶನಕ್ಕೆ ಸಾಕ್ಷಿಯಾಗಿದೆ.

ಸಾಧಕ ವಿದ್ಯಾರ್ಥಿಗಳಾದ ಹಿತಾರ್ಥ ಕಡಬ (೨೯೬), ಲಿವಿತ್ ಪಟೇಲ್ ಜಿ.ಎನ್. (೨೮೪), ಸುಜನ್ ಗೌಡ ಎ.ಆರ್. (೨೬೪), ಅವನಿ ಜಿ.ಎಂ. (೨೬೦), ತನು ಎ. (೨೪೪), ಅದಿಶಾ ತೇಜ ಕೊಕಿಲಾ (೨೪೦), ಆಯುಷ್ ಎಂ.ವಿ. (೨೩೮), ವಿಶಾಲ್ ಸರೋಜ್ (೨೩೮), ಓಂಕಾರ್ ಉಲ್ಲೇಗಡ್ಡಿ (೨೩೪), ಧನುಷ್ ಪಟೇಲ್ ಎನ್. (೨೩೨), ಪ್ರತೀಕ್ಷಾ ರಾಘವೇಂದ್ರ ಭೋವಿ (೨೨೫), ಮಯೂರಿ ಆರ್. ಜೈನ್ (೨೨೦), ಶ್ರೇಯಾ ರಣ್ಣ (೨೧೯), ಆದಿತ್ ಜೈನ್ ಟಿ.ಡಿ. (೨೧೮), ಯಶಿ ಎಲ್. (೨೧೭), ಚರಣ್ ಎಸ್. ರೆಡ್ಡಿ (೨೧೧), ಕುಶಾಲ್ ಟಿ.ಎಸ್. (೨೦೬), ಪವನ್ ಎನ್. (೨೦೬), ಪ್ರಜ್ಞಾ ಆರ್. (೨೦೪), ಶ್ರದ್ಧಾ ಕೆ.ಜಿ. (೨೦೪), ಧ್ರುವ ಡಿ. (೨೦೩) ಹಾಗೂ ಜ್ಞಾನ ಎ.ಎಂ. (೨೦೩) ಅಂಕ ಗಳಿಸಿ ಯಶಸ್ಸು ಸಾಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಹಿತರ್ಥ ಕಡಬ ದ್ವಿತೀಯ ಸ್ಥಾನ ಹಾಗೂ ಲಿವಿತ್ ಪಟೇಲ್ ಜಿ ಎನ್ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ವೃತ್ತಿಪರ ಶಿಕ್ಷಣದಲ್ಲಿಯೂ ಇದೇ ಸಾಧನೆಯ ಛಾಪು ಮೂಡಿಸಿ ಉನ್ನತ ವೃತ್ತಿಜೀವನ ರೂಪಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.

Post a Comment

0 Comments

Advertisement