ನ. 21ರಂದು ಕಡಂದಲೆಯಲ್ಲಿ 'ಪ್ರಜಾಸೇವಾ ಆಂದೋಲನ ಸಭೆ"

ನ. 21ರಂದು ಕಡಂದಲೆಯಲ್ಲಿ 'ಪ್ರಜಾಸೇವಾ ಆಂದೋಲನ ಸಭೆ"

ಮೂಡುಬಿದಿರೆ ತಾಲೂಕು ಹಂತದ "ಪ್ರಜಾಸೇವಾ ಆಂದೋಲನ ಸಭೆ"
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಮೂಡುಬಿದಿರೆ ತಾಲೂಕಿನ ಹೋಬಳಿ ಮಟ್ಟದ 'ಪ್ರಜಾಸೇವಾ ಆಂದೋಲನ ಸಭೆ'ಯು ನ.21  ಶನಿವಾರ ಪೂರ್ವಾಹ್ನ 10.30 ಗಂಟೆಗೆ ಕಡಂದಲೆ ಗ್ರಾಮದ ಪೂಪಾಡಿಕಲ್ಲುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ.

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ  ಸಭೆಯು ನಡೆಯಲಿದ್ದು ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ಸಲ್ಲಿಸಿ, ಸದುಪಯೋಗಪಡಿಸಿಕೊಳ್ಳುವಂತೆ ಮೂಡುಬಿದಿರೆ ತಾಲೂಕು ಕಛೇರಿಯ ಪ್ರಕಟಣೆ ತಿಳಿಸಿದೆ.

Post a Comment

0 Comments

Advertisement