ನ. 7 : ಅವಿಭಜಿತ ಜಿಲ್ಲೆಯ ಮೊದಲ ಕಂಬಳ ಪಣಪಿಲದಲ್ಲಿ
17ನೇ ವರ್ಷದ ಜಯ-ವಿಜಯ ಜೋಡುಕರೆ ಕಂಬಳದಲ್ಲಿ ಉದ್ಯಮಿ ಅಭಿಷೇಕ್ ಭಂಡಾರಿಗೆ 'ಪಣಪಿಲ ಕಂಬಳ ರತ್ನ ಪ್ರಶಸ್ತಿ'
ಮೂಡುಬಿದಿರೆ: ಪಣಪಿಲ "ಜಯ-ವಿಜಯ" ಜೋಡುಕರೆ ಕಂಬಳ ಸಮಿತಿಯಿಂದ ನ. 7ರಂದು 17ನೇ ವರ್ಷದ ಹೊನಲು ಬೆಳಕಿನ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳವು ನಡೆಯಲಿದೆ ಎಂದು ಪಣಪಿಲ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ಪಣಪಿಲ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂಬಳವು ಶನಿವಾರ ಬೆಳಗ್ಗೆ 8.30ಕ್ಕೆ ಆರಂಭಗೊಳ್ಳಲಿದ್ದು
ಸಮಿತಿಯ ಗೌರವಾಧ್ಯಕ್ಷ, ಶಾಸಕ ಉಮಾನಾಥ್ ಎ. ಕೋಟ್ಯಾನ್ ಕಂಬಳ ಉದ್ಘಾಟಿಸಲಿದ್ದಾರೆ. ಕಂಬಳ ಸಮಿತಿಯ ಅಧ್ಯಕ್ಷ ಯುವರಾಜ್ ಜೈನ್ ನಂದೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಘನ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್, ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ತೀಪು೯ಗಾರ ಗುಣಪಾಲ ಕಡಂಬ, ಮೂಡುಬಿದಿರೆ ಕಂಬಳ ಸಮಿತಿಯ ಪ್ರ. ಕಾಯ೯ದಶಿ೯ ರರಂಜಿತ್ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಭಾ ಕಾಯ೯ಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಕಾಕ೯ಳ ಶಾಸಕ ಹರೀಶ್ ಪೂಂಜಾ, ಪುತ್ತೂರು ಶಾಸಕ ಅಶೋಕ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಕಂಬಳ ಅಸೋಸಿಯೇಷನ್ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಐಕಳ, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ, ಹರಿಮೀನಾಕ್ಷಿದೋಟ ಸುರೇಶ್ ಶೆಟ್ಟಿ, ಜಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಸಹಿತ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಪಣಪಿಲ ಕಂಬಳ ರತ್ನ ಪ್ರಶಸ್ತಿ ಪ್ರದಾನ, ಸನ್ಮಾನ : ಮುಂಬೈಯ ಉದ್ಯಮಿ ಅಭಿಷೇಕ್ ಭಂಡಾರಿ ಅವರಿಗೆ ಈ ಬಾರಿ "ಪಣಪಿಲ ಕಂಬಳ ರತ್ನ ಪ್ರಶಸ್ತಿ" ಪ್ರದಾನ ಮಾಡಲಾಗುವುದು. ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಇದೇ ಸಂದಭ೯ದಲ್ಲಿ ಸನ್ಮಾನಿಸಲಾಗುವುದು ಎಂದರು.
ಕಂಬಳದ ಕೋಣಗಳನ್ನು ಕರೆಗೆ ಇಳಿಸುವ ವೇಳಾಪಟ್ಟಿಯಂತೆ ಬೆಳಗ್ಗೆ 8 ಗಂಟೆಗೆ ನೇಗಿಲು ಕಿರಿಯ ವಿಭಾಗ, 10.30ಕ್ಕೆ ನೇಗಿಲು ಹಿರಿಯ ವಿಭಾಗ, ಮಧ್ಯಾಹ್ನ 2 ಗಂಟೆಗೆ ಹಗ್ಗ ಹಿರಿಯ ಮತ್ತು ಕಿರಿಯ ವಿಭಾಗ ಹಾಗೂ ಸಂಜೆ 4 ಗಂಟೆಗೆ ಕನೆ ಹಲಗೆ ಮತ್ತು ಅಡ್ಡ ಹಲಗೆ ವಿಭಾಗದ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಣಪಿಲ ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಜೈನ್, ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು,ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್, ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ, ಕೋಶಾಧಿಕಾರಿ ಪೊಡಂಬು ಸಂದೀಪ್ ಶೆಟ್ಟಿ, ಪ್ರಮುಖರಾದ ಭಾಸ್ಕರ್ ಕೋಟ್ಯಾನ್, ನಂದಳಿಕೆ ಶ್ರೀಕಾಂತ್ ಭಟ್, ಪಿ. ಆರ್. ಶೆಟ್ಟಿ, ಗಿರೀಶ್ ಆಳ್ವ , ಅರುಣ್ ಶೆಟ್ಟಿ, ಪಿ. ಆರ್ ಶೆಟ್ಟಿ, ದೇವರಾಜ್ ಹೆಗ್ಡೆ ಮತ್ತಿತರರಿದ್ದರು.

0 Comments