'ನ. 28ರಂದು ಮೋಹನ್ ಹೊಸ್ಮಾರ್ ಅವರ "ಹಸಿ ನೆನಪುಗಳ ಜೋಳಿಗೆ" ಕೃತಿ ಬಿಡುಗಡೆ

'ನ. 28ರಂದು ಮೋಹನ್ ಹೊಸ್ಮಾರ್ ಅವರ "ಹಸಿ ನೆನಪುಗಳ ಜೋಳಿಗೆ" ಕೃತಿ ಬಿಡುಗಡೆ

ಮೂಡುಬಿದಿರೆ: 'ಅಕ್ಷರ ಜೋಳಿಗೆ' ಕಾವ್ಯನಾಮದಲ್ಲಿ ತಾನು ಬರೆದಿರುವ  ಚೊಚ್ಚಲ ಕವನ ಸಂಕಲನ "ಹಸಿ ನೆನಪುಗಳ ಜೋಳಿಗೆ" ಎಂಬ ಕೃತಿಯು ನ. 28 ಶನಿವಾರ ಸಂಜೆ 6:00 ಗಂಟೆಗೆ ಮೂಡುಬಿದಿರೆಯ ರೋಟರಿ ವಿದ್ಯಾಸಂಸ್ಥೆಯ ಅಮರಾವತಿ ಆಡಿಟೋರಿಯಂನಲ್ಲಿ  ಬಿಡುಗಡೆಗೊಳ್ಳಲಿದೆ ಎಂದು  ಕೃತಿಕಾರ ಮೋಹನ್ ಹೊಸ್ಮಾರ್ ತಿಳಿಸಿದ್ದಾರೆ. ಅವರು ಸೋಮವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಕೃತಿಯು ಒಟ್ಟು 60 ಕವನಗಳನ್ನು ಒಳಗೊಂಡಿದ್ದು ಈ ಸಂಕಲನಕ್ಕೆ ಖ್ಯಾತ ಸಾಹಿತಿ, ಇತಿಹಾಸ ತಜ್ಞರು ಹಾಗೂ ಶಿಕ್ಷಕ ಅರವಿಂದ ಚೊಕ್ಕಾಡಿ ಅವರು ಮುನ್ನುಡಿ ಬರೆದಿದ್ದಾರೆ. ಸಾಹಿತಿ, ಅಂಕಣಕಾರರು ಹಾಗೂ ಆಂಗ್ಲ ಭಾಷಾ ಶಿಕ್ಷಕಿಯಾದ  ಪ್ರೇಮಾ ಆರ್. ಮೂಲ್ಕಿ (ಹನಿಬಿಂದು) ಅವರು ಬೆನ್ನುಡಿ ಬರೆದಿದ್ದು, ಸಾಹಿತಿ ಹಾಗೂ ಚಿತ್ರಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ ಅವರು ಮುಖಪುಟ ವಿನ್ಯಾಸಗೊಳಿಸಿದ್ದಾರೆ. ಈ ಸಂಕಲನದ 'ಮನವೆಂಬ ಮಂಟಪ' ಕವನವು ಭಾವಗೀತೆಯಾಗಿ ಮೂಡಿಬಂದಿದ್ದು, ಸಂಸ್ಕೃತ ಶಿಕ್ಷಕರಾದ ಗಜಾನನ ಮರಾಠೆ ಅವರ ರಾಗಸಂಯೋಜನೆಯಲ್ಲಿ ಶ್ವೇತಾ ಹೆಬ್ಬಾರ್ ಅವರು ಹಾಡಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕರಾದ ರಾಘವೇಂದ್ರ ಬೀಜಾಡಿ ಹಾಗೂ ಝೀ ಕನ್ನಡ 'ಸರಿಗಮಪ' ಖ್ಯಾತಿಯ ವಿಶ್ವದಾಖಲೆ ವಿಜೇತ ವಿದ್ವಾನ್ ಯಶವಂತ್ ಎಂ. ಜಿ. ಮೂಡುಬಿದಿರೆ ಅವರು ಈ ಸಂಕಲನದ ಎರಡು ಕವನಗಳಿಗೆ ರಾಗಸಂಯೋಜನೆ ಮಾಡಿ ಭಾವಗೀತೆಯಾಗಿ ಹಾಡಲಿದ್ದಾರೆ. ಈ ಕವನ ಸಂಕಲನವನ್ನು ವಿಜಯಲಕ್ಷ್ಮಿ ಫೌಂಡೇಷನ್ ಪ್ರಾಯೋಜಿಸಿ ಪ್ರವರ್ತಕರಾದ ಏ.ಕೆ ರಾವ್ ಅವರು ನೆರವು ಒದಗಿಸಿದ್ದಾರೆ.

ಸಾಹಿತ್ಯಾಸಕ್ತರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪುಸ್ತಕದ ಸಂಕಲನಕಾರ ಮೋಹನ್ ಹೊಸ್ಮಾರ್ ವಿನಂತಿಸಿದ್ದಾರೆ.

Post a Comment

0 Comments

Advertisement