ತುಳುನಾಡಿನ ಜೈನ ಅರಸು ಮನೆತನದ ಇತಿಹಾಸ ಅನಾವರಣಕ್ಕೆ ಸಜ್ಜು‘ಕೆಲ್ಲಪುತ್ತಿಗೆಯ ಕೆಲ್ಲರು’ ಕೃತಿ ನ. 14ರಂದು ಲೋಕಾರ್ಪಣೆ

ತುಳುನಾಡಿನ ಜೈನ ಅರಸು ಮನೆತನದ ಇತಿಹಾಸ ಅನಾವರಣಕ್ಕೆ ಸಜ್ಜು

‘ಕೆಲ್ಲಪುತ್ತಿಗೆಯ ಕೆಲ್ಲರು’ ಕೃತಿ ನ. 14ರಂದು ಲೋಕಾರ್ಪಣೆ

ಮಂಗಳೂರು: ತುಳುನಾಡಿನ ಇತಿಹಾಸ, ಜೈನ ಅರಸು ಮನೆತನದ ಪರಂಪರೆ ಹಾಗೂ ಕೆಲ್ಲ ವಂಶದ ಐತಿಹಾಸಿಕ ಹಿನ್ನೆಲೆಯನ್ನು ದಾಖಲಿಸಿರುವ ಮಹತ್ವದ ಕೃತಿ ‘ಕೆಲ್ಲಪುತ್ತಿಗೆಯ ಕೆಲ್ಲರು – ತುಳುನಾಡಿನ ಜೈನ ಅರಸು ಮನೆತನದ ಇತಿಹಾಸ ಶೋಧ’ ನವೆಂಬರ್ 14ರಂದು ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ, ಡಾ. ಪಿ.ಎನ್. ನರಸಿಂಹ ಮೂರ್ತಿ ವಿರಚಿತ ಈ ಕೃತಿಯ ಬಿಡುಗಡೆ ಸಮಾರಂಭವು ಶನಿವಾರ ಸಂಜೆ 4.30ಕ್ಕೆ ಮಂಗಳೂರಿನ ಉರ್ವಸ್ಟೋರ್‌ನ ತುಳು ಭವನದಲ್ಲಿ ನಡೆಯಲಿದೆ.

ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ತುಕರಾಮ ಪೂಜಾರಿ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿ, ಕೃತಿಯ ಕುರಿತು ಅವಲೋಕನ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕೆಲ್ಲ ವಂಶಸ್ಥ ಕೆ.ಪಿ. ಜಗದೀಶ ಅಧಿಕಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ತುಳುನಾಡಿನ ಇತಿಹಾಸ ಮತ್ತು ಜೈನ ಅರಸು ಮನೆತನದ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಲಿರುವ ಈ ಕೃತಿ ಬಿಡುಗಡೆ ಸಮಾರಂಭದಲ್ಲಿ ಸಾಹಿತ್ಯಾಸಕ್ತರು, ಇತಿಹಾಸ ಸಂಶೋಧಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಮತ್ತು ಕಾರ್ಯಕ್ರಮದ ಸದಸ್ಯ ಸಂಚಾಲಕ ಅಕ್ಷಯ ಆರ್. ಶೆಟ್ಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Post a Comment

0 Comments

Advertisement