ಮೂಡುಬಿದಿರೆ: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇವರು ನಡೆಸಿದ ಭರತನಾಟ್ಯದ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕು . ಅನನ್ಯ ರಂಜನಿ ಉನ್ನತ ಶ್ರೇಣಿಯನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಇವರು ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್, ವಿದುಷಿ ಶ್ರೀಲತಾ ನಾಗರಾಜ್ ಹಾಗೂ ರಶ್ಮಿತಾ ಲಾಸ್ಯ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದ ತರಬೇತಿ ಪಡೆದಿರುತ್ತಾರೆ.
ಮೂಡುಬಿದಿರೆಯ ಶಿಕ್ಷಕ ದಂಪತಿಗಳಾದ ಮಹಾವೀರ ಜೈನ್ - ಆರತಿ ಇವರ ಪುತ್ರಿಯಾಗಿರುವ ಅನನ್ಯ ರಂಜನಿ ಪೋಷಕರ ಪ್ರೋತ್ಸಾಹ, ತಮ್ಮ ನಿರಂತರ ಪರಿಶ್ರಮ, ಆಸಕ್ತಿ ಹಾಗೂ ಗುರುಗಳ ಮಾರ್ಗದರ್ಶನದಿಂದ ಈ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಇವರು ಬೆಂಗಳೂರಿನ ಎಂ. ಎಸ್. ರಾಮಯ್ಯ
ಕಾಲೇಜಿನಲ್ಲಿ. ರಾಸಾಯನ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

0 Comments