ಅಳಿಯೂರಿನಲ್ಲಿ ಅಂಚೆ ಸಂಪಕ೯ ಅಭಿಯಾನ
ಮೂಡುಬಿದಿರೆ : ಜನರಿಗೆ ಅಗತ್ಯ ಸೇವೆಗಳನ್ನು ಅಂಚೆ ಇಲಾಖೆಯ ಮೂಲಕ ಒದಗಿಸಲು ಹೊರಟಿರುವ ಮತ್ತು ಸಮಾಜದಲ್ಲಿ ವಿಶ್ವಾಸದೊಂದಿಗೆ ಕೆಲಸವನ್ನು ಮಾಡುತ್ತಿರುವ ಅಂಗನವಾಡಿ ಮತ್ತು ಆಶಾ ಕಾಯ೯ಕತೆ೯ಯರನ್ನು ಗುರುತಿಸುವ ಮೂಲಕ ಒಬಿಸಿ ಮೋಚಾ೯ ಜನ ಸೇವೆಗೆ ಆದ್ಯತೆಯನ್ನು ನೀಡುತ್ತಿದೆ ಎಂದು ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಹೇಳಿದರು.
ಅವರು ನರೇಂದ್ರ ಮೋದಿ ಅವರ 25 ವಷ೯ಗಳ ಸಾಧನೆ ರಾಜಕೀಯ ಜೀವನದ ಅಂಗವಾಗಿ ಭಾರತೀಯ ಜನತಾ ಪಾಟಿ೯ ಹಿಂದುಳಿದ ವಗ೯ಗಳಣ ಮೋಚಾ೯ ಮುಲ್ಕಿ-ಮೂಡುಬಿದಿರೆ ಮಂಡಲದ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಅಳಿಯೂರಿನ ಹೇಮಾ ಸಭಾಭವನದಲ್ಲಿ ಭಾನುವಾರ ನಡೆದ ಅಂಚೆ ಜನ ಸಂಪಕ೯ ಅಭಿಯಾನ (ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ)ವನ್ನು ಉದ್ಘಾಟಿಸಿ ಮಾತನಾಡಿದರು.
ಮೋಚಾ೯ವು ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ಹಲವು ಜನ ಸೇವೆಯ ಕಾಯ೯ಕ್ರಮಗಳನ್ನು ನಡೆಸಿದೆ. ಗ್ರಾಮ ಮಟ್ಟದಲ್ಲಿ ಉತ್ತಮ ಕೆಲಸಗಳನ್ನು ಮಾಡಿದರೆ ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸು ಆದಷ್ಟು ಬೇಗ ನನಸಾಗಲು ಸಾಧ್ಯವಿದೆ ಎಂದರು.
ಸನ್ಮಾನ : ಬಿಜೆಪಿ ಮಂಡಲದ ಹಿಂದುಳಿದ ವಗ೯ಗಳ ಮೋಚಾ೯ದ ಅಧ್ಯಕ್ಷ ಪ್ರದೀಪ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಅಂಗನವಾಡಿ ಮತ್ತು ಆಶಾ ಕಾಯ೯ಕತೆ೯ಯರನ್ನು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿದ್ಯಾಥಿ೯ಗಳನ್ನು ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ,ಬೆಳುವಾಯಿ ಶಿತಾ೯ಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮನಾಥ ಕೋಟ್ಯಾನ್, ಕಾಯ೯ದಶಿ೯ ಜಯಂತ ಹೆಗ್ಡೆ, ಶಿತಾ೯ಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಸುವಣ೯, ಶಶಿಧರ್ ಅಂಚನ್ ಎನಿಕ್ರಿಪಲ್ಲ, ಅಂಚೆ ಇಲಾಖೆಯ ಪುತ್ತೂರು ವಿಭಾಗದ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಹೇಮಾ ಸಭಾಭವನದ ಮಾಲಕಿ ಹೇಮಾವತಿ ಕೆ. ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೋಚಾ೯ದ ಪ್ರಧಾನ ಕಾಯ೯ದಶಿ೯ಗಳಾದ ಹೇಮಂತ್ ಅಮೀನ್ ಮತ್ತು ಸಂಪತ್ ನೆತ್ತೋಡಿ ಉಪಸ್ಥಿತರಿದ್ದರು.
ಗಣೇಶ್ ಬಿ. ಅಳಿಯೂರು ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

0 Comments