ರೋಟರಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಶಾರದಾಪೂಜೆಯನ್ನು ವಿಜೃಂಭಣೆಯಿಂದ 17/10/2026ರ ಶನಿವಾರ ಆಚರಿಸಲಾಯಿತು. ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಈ ಪೂಜಾ ಕಾರ್ಯಕ್ರಮ, ಇಲ್ಲಿನ ಸಮ್ಮಿಲನ ಸಭಾಂಗಣದಲ್ಲಿ ಶಿಕ್ಷಕ ಗೋಪಾಲಕೃಷ್ಣ ಜಿ ಕೆ ಸಿದ್ಧಪಡಿಸಿದ ಸುಂದರವಾದ ಮಂಟಪದಲ್ಲಿ ಶಾರದಾದೇವಿಯ ಪ್ರತಿಷ್ಠೆಯೊಂದಿಗೆ ಪ್ರಾರಂಭವಾಯಿತು.
ಸುಂದರವಾದ ತಳಿರುತೋರಣ, ರಂಗೋಲಿ ಹಾಗೂ ದೀಪಾಲಂಕಾರಗಳಿಂದ ಅಲಂಕೃತಗೊಂಡ ಸಭಾಂಗಣದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ
ಸಂಗೀತ, ಭಜನೆ , ಕುಣಿತ ಭಜನೆಯ ನಂತರ , ಮಹಾಮಂಗಳಾರತಿಯೊಂದಿಗೆ ಪೂಜಾ ಕಾರ್ಯಕ್ರಮ ಮುಕ್ತಾಯಗೊಂಡಿತು.ರೋಟರಿ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿ ಎಂ ದಂಪತಿಗಳು , ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ ಹಾಗೂ ಜೆ ಡಬ್ಲ್ಯೂ ಪಿಂಟೊ, ಖಜಾಂಚಿ ನಾಗರಾಜ್, ಸಂಸ್ಥೆಯ ಮುಖ್ಯಸ್ಥರು , ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗ , ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪುಣ್ಯಭಾಗಿಗಳಾದರು.ಸಂಗೀತ ಸೇವೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳಿಂದ ಮತ್ತು ವಿದ್ಯಾರ್ಥಿಗಳಿಂದ ನಡೆದ ಭಜನೆ , ವಿದ್ಯಾರ್ಥಿಗಳು ನಡೆಸಿಕೊಟ್ಟ ಕುಣಿತ ಭಜನೆ ಮತ್ತು ಮುಖ್ಯವಾಗಿ ವಿಧ್ಯಾರ್ಥಿನಿ ಹೃಸ್ವಿಯವರ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮಕ್ಕೆ ಮೆರುಗು ನೀಡಿತು..

0 Comments