ಮೂಡುಬಿದಿರೆ : ತಾಯಿ- ಮಗ ನಾಪತ್ತೆ

ಮೂಡುಬಿದಿರೆ : ತಾಯಿ- ಮಗ  ನಾಪತ್ತೆ
ಮೂಡುಬಿದಿರೆ: ತನ್ನ 7ರ ಹರೆಯದ ಮಗನೊಂದಿಗೆ  ಶಿರ್ತಾಡಿಯ ಮಹಿಳಯೋವ೯ರು   6ರಿಂದ ನಾಪತ್ತೆ ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಗ್ರಾಮದ ಜಾಲಿಗುಡ್ಡೆ ಸತ್ಯನಾರಾಯಣ ದೇವಸ್ಥಾನದ ಬಳಿಯ ನಿವಾಸಿ ಮನೆವಾರ್ತೆ ಕೆಲಸ ಮಾಡಿಕೊಂಡಿದ್ದ ಗೀತಾ (39) 
ಹಾಗೂ ಅವರ ಮಗ ಯಶಸ್ (7) ನಾಪತ್ತೆಯಾದವರು. 
 
 ಗೀತಾ ಅವರು ಅ. 6ರಂದು 3.30ರ ಸುಮಾರಿಗೆ ಮಗ ಯಶಸ್‌ನನ್ನು ಶಾಲೆಯಿಂದ ಕರೆದುಕೊಂಡು ಮೂಡುಬಿದಿರೆ ಪೇಟೆಗೆ ಹೋಗಿ ಬರುವುದಾಗಿ ನೆರೆಮನೆಯ ಚಿದಾನಂದ ಅವರಿಗೆ ತಿಳಿಸಿ ತೆರಳಿದ್ದರು. ಆದರೆ, ಮನೆಗೆ ವಾಪಸಾಗದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ಗೀತಾ ಅವರ ಗಂಡ ಸುರೇಶ್ (45) ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣೆಯಾದ ಗೀತಾ 5.3 ಅಡಿ ಎತ್ತರವಿದ್ದು, ಸಪುರ ಶರೀರ, ಗೋಧಿ ಮೈಬಣ್ಣ ಹಾಗೂ ಗುಂಗುರು ಕೂದಲು ಹೊಂದಿದ್ದಾರೆ. ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದರು. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ.

ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 141/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯ 0824-2220801, 2220800 ಅಥವಾ ಮೂಡುಬಿದಿರೆ ಪೊಲೀಸ್ ಠಾಣೆಯ 08258-236333 ಸಂಖ್ಯೆಯನ್ನು ಸಂಪರ್ಕಿಸುವಂತೆ ಮೂಡುಬಿದಿರೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

Advertisement