ಪಾಂಡೇಶ್ವರ‌ ಶಾರದೋತ್ಸವದಲ್ಲಿ ಹಿರಿಯ ಮುಖಂಡ ದಿನಕರ್ ಪಾಂಡೇಶ್ವರ ಅವರಿಗೆ ಸನ್ಮಾನ

ಪಾಂಡೇಶ್ವರ‌ ಶಾರದೋತ್ಸವದಲ್ಲಿ ಹಿರಿಯ ಮುಖಂಡ ದಿನಕರ್ ಪಾಂಡೇಶ್ವರ ಅವರಿಗೆ ಸನ್ಮಾನ

ಪಾಂಡೇಶ್ವರದ ಶಾರದೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಪಾಂಡೇಶ್ವರದ ಶ್ರೀ ರಾಘವೇಂದ್ರ ಭಜನಾ ಮಂದಿರದಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಂಡು, ಧರ್ಮ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಾ ಬಂದಿರುವ  ಹಿರಿಯ ಮುಖಂಡ ಶ್ರೀ ದಿನಕರ್ ಪಾಂಡೇಶ್ವರ ರವರನ್ನು ಯುವಕರ ತಂಡದ ವತಿಯಿಂದ ಅಭಿನಂದಿಸಲಾಯಿತು.

ಯುವಕರಿಗೆ ಕ್ರೀಡಾ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುತ್ತಾ, ಅವರ ಪ್ರತಿಭೆಗೆ ಬೆನ್ನೆಲುಬಾಗಿ ನಿಂತು, ಕ್ರೀಡೆಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವುದು ಅವರ ಕ್ರೀಡಾಪ್ರೇಮ ಮತ್ತು ಸಮಾಜಮುಖಿ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಧಾರ್ಮಿಕತೆ, ಸಂಸ್ಕೃತಿ, ಕ್ರೀಡೆ ಹಾಗೂ ಸಮಾಜಸೇವೆಯನ್ನು ಸಮನ್ವಯಗೊಳಿಸಿ, ಮುಂದಿನ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿರುವ ಅವರ ಸೇವೆ ಸದಾ ಸ್ಮರಣೀಯ ಎಂದು ಸಂಘಟನೆ ಮುಖಂಡರು ಹೇಳಿದರು.

Post a Comment

0 Comments

Advertisement