ಶಿರ್ತಾಡಿ ಹೈಸ್ಕೂಲ್ ನಲ್ಲಿ ರೋಟರಿ ಕಾಲೇಜಿನ ಎನ್ಎಸ್ ಎಸ್ಎಸ್ ಶಿಬಿರ ಆರಂಭ *ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಿ-ರೋ.ಡಾ.ಆಶೀರ್ವಾದ್

ಶಿರ್ತಾಡಿ ಹೈಸ್ಕೂಲ್ ನಲ್ಲಿ ರೋಟರಿ ಕಾಲೇಜಿನ ಎನ್ಎಸ್ ಎಸ್ಎಸ್ ಶಿಬಿರ ಆರಂಭ 

*ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಿ-ರೋ.ಡಾ.ಆಶೀರ್ವಾದ್ 

ಮೂಡುಬಿದಿರೆ:ವಿದ್ಯಾರ್ಥಿಗಳ ಕಲಿಕೆ ತರಗತಿಯ ಕೋಣೆಗಳಿಗೆ ಸೀಮಿತವಾಗಬಾರದು. ಸಾಮಾಜಿಕ ಜವಾಬ್ದಾರಿ, ಸೇವಾ ಮಬೋಭಾವ ಹಾಗು ನಾಯಕತ್ವದ ಗುಣಗಳಿಂದ ಉತ್ತಮ  ವ್ಯಕ್ತಿತ್ವವನ್ನು  ಎಎನ್ಎಸ್ ಎಸ್ ಶಿಬಿರಗಳು ಕಲಿಸಿಕೊಡುತ್ತವೆ ಎಂದು ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್ ಹೇಳಿದರು. 
ಅವರು ಬುಧವಾರ ಶಿರ್ತಾಡಿಯ ಜವಾಹರಲಾಲ್ ನೆಹರು ಪ್ರೌಢಶಾಲೆಯಲ್ಲಿ  ರೋಟರಿ ಪಪೂ ಕಾಲೇಜಿನ ವಿದ್ಯಾರ್ಥಿಗಳ 'ನಶಾ ಮುಕ್ತ  ಭಾರತ ಅಭಿಯಾನ' ವಾರ್ಷಿಕ  ಎನ್ ಎಸ್ ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು. 

 ರೋಟರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ  ನಾರಾಯಣ  ಪಿಎಂ ಅಧ್ಯಕ್ಷತೆ ವಹಿಸಿ ಮಾತನಾಡಿ  ವಿದ್ಯಾರ್ಥಿಗಳಿಗೆ  ಎನ್ ಎಸ್ ಎಸ್  ಶಿಬಿರದಲ್ಲಿ   ಸಿಗುವ ಮಾಹಿತಿ, ಮಾರ್ಗದರ್ಶನವು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಪ್ರೇರಣೆಯಾಗಲಿ ಎಂದರು. 
 ಜವಾಹರ್ ವಿದ್ಯಾಸಂಘದ ಕಾರ್ಯದರ್ಶಿ ಟಿ.ಕೆ ವೆಂಕಟ್ರಾವ್    ಶಿಬಿರದ ಪ್ರಯೋಜನಗಳನ್ನು ತಿಳಿಸಿದರು. ಜವಾಹರ್ ವಿದ್ಯಾ ಸಂಘದ  ಸದಸ್ಯರಾದ ಸತೀಶ್ ಶೆಟ್ಟಿ, ಪದ್ಮನಾಭ ಕೋಟ್ಯಾನ್, ಜವಾಹರಲಾಲ್ ಹೈಸ್ಕೂಲ್ ಮುಖ್ಯೋಪಧ್ಯಾಯಿನಿ ಸಾವಿತ್ರಿ,  ರೋಟರಿ ಕಾಲೇಜಿನ ಪ್ರಾಚಾರ್ಯ ರವಿ ಕುಮಾರ್, ಶಿಬಿರಾಧಿಕಾರಿ ಶಹನ್ ರಾಜ್, ರೋಟರಿ ಸೆಂಟ್ರಲ್ ಸ್ಕೂಲ್ ನ ಪ್ರಾಚಾರ್ಯೆ ಲಕ್ಷ್ಮೀ ಮರಾಠೆ, ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯಿನಿ ತಿಲಕ ಅನಂತವೀರ ಜೈನ್  ಉಪಸ್ಥಿತರಿದ್ದರು. ಸಹಶಿಬಿರಾಧಿಕಾರಿ ಸುಷ್ಮಾ ಬಿ.ಆರ್, ಸ್ವಾಗತಿಸಿದರು. ಮಾಲತಿ ನಿರೂಪಿಸಿ, ವಿದ್ಯಾಶ್ರೀ ಜೈನ್ ವಂದಿಸಿದರು.

Post a Comment

0 Comments

Advertisement