ಮೂಡುಬಿದಿರೆ : ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 3181 ರ ವತಿಯಿಂದ ವಿಶ್ವ ಪೋಲಿಯೋ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಪೋಲಿಯೋ ನಿರ್ಮೂಲನೆ ಕುರಿತು ಅರಿವು ಮೂಡಿಸಲು ಬೃಹತ್ ಜಾಗೃತಿ ವಾಹನ ಯಾತ್ರೆ (ರ‍್ಯಾಲಿ) ಶನಿವಾರ ಮೂಡುಬಿದಿರೆಗೆ ಆಗಮಿಸಿತು.
'ಎಂಡ್ ಪೋಲಿಯೋ ನೌ' (End Polio Now) ಅಭಿಯಾನದ ಭಾಗವಾಗಿ ಅಕ್ಟೋಬರ್ 24, 2026 ರಂದು ಹಮ್ಮಿಕೊಳ್ಳಲಾದ ಈ ಜಾಗೃತಿ ರ‍್ಯಾಲಿಯು ಮಂಗಳೂರಿನ ಕರಾವಳಿ ಉತ್ಸವ ಮೈದಾನದಿಂದ ಚಾಲನೆ ಪಡೆದುಕೊಂಡು, ಬಿಜೈ, ಸುರತ್ಕಲ್, ಮುಲ್ಕಿ, ಮೂಡು ಮೂಲಕ ಸಂಚರಿಸಿ ಪುತ್ತೂರಿನಲ್ಲಿ ಸಮಾರೋಪಗೊಳ್ಳಲಿದೆ.
"ಪೋಲಿಯೋ ಮುಕ್ತ ಭಾರತ"ದ ಧ್ಯೇಯದೊಂದಿಗೆ, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಮೂಡುಬಿದಿರೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಈ ಕುರಿತಾದ ಜಾಗೃತಿ ಫಲಕವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಪೋಲಿಯೋ ದ ಬಗ್ಗೆ ಬೀದಿ ನಾಟಕವನ್ನು ಪ್ರಸ್ತುತ ಪಡಿಸಿದರು.
ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

0 Comments