ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗೆ ಕರಡು ಮೀಸಲಾತಿ ಪಟ್ಟಿ ಪ್ರಕಟ
ಮೂಡುಬಿದಿರೆ ತಾಲೂಕಿನ ಪ್ರಾದೇಶಿಕ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ವಿವರಗಳ ಪ್ರಕಾರ ರಾಜಕೀಯ ಪಕ್ಷಗಳಲ್ಲಿ ಚುನಾವಣೆಯ ಆಕಾಂಕ್ಷಿಗಳು ತಯಾರಾಗುತ್ತಿದ್ದಾರೆ.
ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಬೆಳುವಾಯಿ ಕ್ಷೇತ್ರವನ್ನು ಸಾಮಾನ್ಯ (ಮಹಿಳೆ) ವರ್ಗಕ್ಕೆ ಹಾಗೂ ಪುತ್ತಿಗೆ ಕ್ಷೇತ್ರವನ್ನು ಹಿಂದುಳಿದ ವರ್ಗ ‘ಎ’ಗೆ ಮೀಸಲಿಡಲಾಗಿದೆ.
ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ, ಬೆಳುವಾಯಿ ಕ್ಷೇತ್ರವು ಅನುಸೂಚಿತ ಪಂಗಡ (ಮಹಿಳೆ), ನೆಲ್ಲಿಕಾರು ಕ್ಷೇತ್ರವು ಹಿಂದುಳಿದ ವರ್ಗ ‘ಎ, ಪುತ್ತಿಗೆ ಮತ್ತು ತೆಂಕಮಿಜಾರು ಕ್ಷೇತ್ರಗಳು ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿವೆ.
ತೋಡಾರು ಕ್ಷೇತ್ರವನ್ನು ಹಿಂದುಳಿದ ವರ್ಗ ‘ಎ’ (ಮಹಿಳೆ), ವಾಲ್ಪಾಡಿ ಕ್ಷೇತ್ರವನ್ನು ಅನುಸೂಚಿತ ಜಾತಿ (ಮಹಿಳೆ) ವರ್ಗಕ್ಕೆ ಮೀಸಲಿಡಲಾಗಿದೆ. ಕಡಂದಲೆ, ಪಡುಮಾರ್ನಾಡು ಹಾಗೂ ಕಲ್ಲಮುಂಡ್ಯೂರು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ನಿಗದಿಯಾಗಿವೆ.

0 Comments