ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆ : ಆಳ್ವಾಸ್‌ನ 21 ವಿದ್ಯಾರ್ಥಿಗಳು ಉತ್ತೀರ್ಣ,ರಕ್ಷಾ ರಾಮಚಂದ್ರ ನಾಯ್ಕ್ ಗೆ ರಾಷ್ಟ್ರೀಯ ಮಟ್ಟದ 49ನೇ ರ‍್ಯಾಂಕ್

ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆ : ಆಳ್ವಾಸ್‌ನ 21 ವಿದ್ಯಾರ್ಥಿಗಳು ಉತ್ತೀರ್ಣ,
ರಕ್ಷಾ ರಾಮಚಂದ್ರ ನಾಯ್ಕ್ ಗೆ ರಾಷ್ಟ್ರೀಯ ಮಟ್ಟದ 49ನೇ ರ‍್ಯಾಂಕ್

ಮೂಡುಬಿದಿರೆ: ಸೆಪ್ಟೆಂಬರ್ 2026ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ  ವೃತ್ತಿಪರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ.  ರಕ್ಷಾ ರಾಮಚಂದ್ರ ನಾಯ್ಕ್ ಎರಡೂ ಗ್ರೂಪ್‌ಗಳಲ್ಲಿ ಮೊದಲ ಪ್ರಯತ್ನದಲ್ಲೇ 435 ಅಂಕಗಳೊಂದಿಗೆ ಉತ್ತೀರ್ಣಳಾಗಿ, ರಾಷ್ಟ್ರೀಯ ಮಟ್ಟದಲ್ಲಿ 49ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.  

ಸಿಎ ಇಂಟರ್‌ಮಿಡಿಯೇಟ್ ಪರೀಕ್ಷೆಯಲ್ಲಿ ಒಟ್ಟು 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಸಿಎ ಇಂಟರ್‌ಮೀಡಿಯೇಟ್ ಗ್ರೂಪ್-1 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದ ಉತ್ತೀರ್ಣತಾ ಪ್ರಮಾಣ ಶೇ.23.14ರಷ್ಟಿದ್ದರೆ, ಆಳ್ವಾಸ್ ಪದವಿ ಕಾಲೇಜಿನ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.54.54ರ ಫಲಿತಾಂಶ ದಾಖಲಿಸಿದ್ದಾರೆ. ಗ್ರೂಪ್-2ರಲ್ಲಿ ರಾಷ್ಟ್ರೀಯ ಉತ್ತೀರ್ಣತಾ ಪ್ರಮಾಣ ಶೇ.18.92ರಷ್ಟಿದ್ದರೆ, ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.31.03ರ ಫಲಿತಾಂಶ ಸಾಧಿಸಿದ್ದಾರೆ. ಎರಡೂ ಗ್ರೂಪ್‌ಗಳ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದ ಉತ್ತೀರ್ಣತಾ ಪ್ರಮಾಣ ಶೇ.13.21ರಷ್ಟಿದ್ದರೆ, ಆಳ್ವಾಸ್‌ನ ಆರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.23.08ರ ಫಲಿತಾಂಶ ದಾಖಲಿಸಿದ್ದಾರೆ.


ಎರಡೂ ಗ್ರೂಪ್‌ಗಳಲ್ಲಿ ಗಮನಾರ್ಹ ಸಾಧನೆ
ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯ ಗ್ರೂಪ್-1 ಮತ್ತು ಗ್ರೂಪ್-2 ಎರಡರಲ್ಲೂ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ ರಕ್ಷಾ ರಾಮಚಂದ್ರ ನಾಯ್ಕ್ (435), ಅವನಿ ಉಮೇಶ್ ರಾವ್ (415), ಫಾತಿಮಾ ಅಸ್ನಾ (388), ಅಂಕಿತಾ ರಾವ್ (372), ಜೈಶ್ನವ್ ಜಿ. (318) ಹಾಗೂ ಪ್ರಜ್ವಲ್ ಕೆ. (307) ಗಮನಾರ್ಹ ಸಾಧನೆ ಮಾಡಿದ್ದಾರೆ.
ಗ್ರೂಪ್-2ರಲ್ಲಿ ಪ್ರಸಿದ್ಧ್ ಎಂ. ಪೂಜಾರಿ (172), ಸಾಕ್ಷಿ ಆರ್. ಪೈ (170) ಹಾಗೂ ಸುಮುಖ್ ವೇಲಂಕರ್ (162) ಉತ್ತಮ ಅಂಕಗಳೊAದಿಗೆ ಉತ್ತೀರ್ಣರಾಗಿದ್ದಾರೆ.
ಗ್ರೂಪ್-1ರಲ್ಲಿ ಪ್ರತೀಶ್ ಆಂಟೋನಿ ಡಿಸೋಜಾ (184), ಸ್ವಾತಿ (183), ಅಪರ್ಣಾ ಸುಧಿ (164), ಭಟ್ ಅಮಿಷಾ (163), ಹರ್ಷಿತಾ ಪೂಜಾರಿ (163), ತೇಜಸ್ವಿನಿ ಕೆ.ಎಸ್. (163), ಜೆ. ಬಸವರಾಜ್ (160), ಪ್ರಜ್ಞಾ ಎನ್. (159), ಸಹನಾ ಕುಮಾರಿ (151), ಮಿಜ್ಬಾ ಶೇಖ್ (150), ನಿಶಾ ಯು. ಶೆಟ್ಟಿ (150) ಹಾಗೂ ಚೈತನ್ಯ ಶ್ರೀರಂಗ (150) ಉತ್ತೀರ್ಣರಾಗಿದ್ದಾರೆ.
ಬಾಕ್ಸ್ -01
ಆಳ್ವಾಸ್‌ನ ಶೈಕ್ಷಣಿಕ ಬೆಂಬಲ ಸಾಧನೆಗೆ ಪೂರಕ: ರಕ್ಷಾ
ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ಬಿಕಾಂನೊAದಿಗೆ ಸಿಎ ವ್ಯಾಸಂಗ ಮಾಡುತ್ತಿರುವ ರಕ್ಷಾ ರಾಮಚಂದ್ರ ನಾಯ್ಕ ಸಿಎ ಇಂಟರ್‌ಮಿಡಿಯೇಟ್ ಪರೀಕ್ಷೆಯಲ್ಲಿ ರಾಷ್ಟಿçÃಯ ಮಟ್ಟದಲ್ಲಿ 49ನೇ ರ‍್ಯಾಂಕ್‌ಗಳಿಸಿ ಸಾಧನೆ ಮೆರೆದಿದ್ದಾರೆ.
ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಆರು ಅಣಕು ಪರೀಕ್ಷೆಗಳು (ಮಾಕ್ ಟೆಸ್ಟ್ಗಳು) ಹಾಗೂ ಅದಕ್ಕೂ ಮುನ್ನ ನಡೆಸಿದ್ದ ಸರಣಿ ಪರೀಕ್ಷೆಗಳು ಸಿಎ ಪರೀಕ್ಷೆಯ ಸಿದ್ಧತೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಕಳೆದ ಮೂರು ತಿಂಗಳುಗಳಿAದ ಪ್ರತಿದಿನ 10ರಿಂದ 12 ಗಂಟೆಗಳ ಕಾಲ ನಿರಂತರ ಅಧ್ಯಯನ ನಡೆಸಿದ್ದು, ಈ ಪರಿಶ್ರಮದ ಜೊತೆಗೆ ಆಳ್ವಾಸ್‌ನಲ್ಲಿ ದೊರೆತ ಶೈಕ್ಷಣಿಕ ಬೆಂಬಲ ಮತ್ತು ಪರೀಕ್ಷಾ ಸಿದ್ಧತೆಗೆ ಪೂರಕವಾದ ವ್ಯವಸ್ಥೆಗಳು ಉತ್ತಮ ಫಲಿತಾಂಶಗಳಿಸಲು ಸಹಕಾರಿಯಾಗಿದೆ.  ಮುಂದಿನ ಸಿಎ ಅಂತಿಮ ಪರೀಕ್ಷೆಯಲ್ಲಿಯೂ ಉತ್ತಮ ರ‍್ಯಾಂಕ್‌ನೊAದಿಗೆ ಉತ್ತೀರ್ಣರಾಗುವ ಹಂಬಲವನ್ನು ರಕ್ಷಾ  ವ್ಯಕ್ತಪಡಿಸಿದ್ದಾರೆ.
ಬಾಕ್ಸ್-02
ವೃತ್ತಿಪರ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವಂತೆ ಆಳ್ವಾಸ್ ಶಿಕ್ಷಣ ಸಂಸ್ಥೆ ಒದಗಿಸುತ್ತಿರುವ ನಿರಂತರ ಮಾರ್ಗದರ್ಶನ, ಪರೀಕ್ಷಾ ಸಿದ್ಧತೆಯ ವ್ಯವಸ್ಥೆ ಮತ್ತು ವಿದ್ಯಾರ್ಥಿಕೇಂದ್ರಿತ ಶೈಕ್ಷಣಿಕ ಬೆಂಬಲವು ಈ ಫಲಿತಾಂಶದಲ್ಲಿ ಪ್ರತಿಫಲಿತವಾಗಿದೆ: ಡಾ ಎಮ್ ಮೋಹನ ಆಳ್ವ.
ವಿದ್ಯಾರ್ಥಿಗಳ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Post a Comment

0 Comments

Advertisement