ಮೂಡುಬಿದಿರೆ : ಮೇಕಪ್ ಬಾಬು ಮಾಷ್ಟ್ರು ಎಂದೇ ಖ್ಯಾತರಾಗಿದ್ದ ನಿವೃತ್ತ ಶಿಕ್ಷಕ, ಶಿಕ್ಷಣ ಸಂಯೋಜಕ, ಅಮೃತ್ ಆರ್ಟ್ಸ್ ನ ಮಾಲಕ
ಮಾರೂರು ನಿವಾಸಿ ಬಾಬು ಕೆ.( 76)ಅವರು ಭಾನುವಾರ ರಾತ್ರಿ ನಿಧನ ಹೊಂದಿದ್ದಾರೆ.
ಅಮೃತ್ ಆರ್ಟ್ಸ್ ಎಂಬ ಪ್ರಸಾಧನ ತಂಡವನ್ನು ಕಟ್ಟಿಕೊಂಡು ಜಿಲ್ಲೆಯಲ್ಲಿ ನಡೆಯುತ್ತಿದ್ದ ತುಳು ನಾಟಕಗಳ ಪಾತ್ರಧಾರಿಗಳಿಗೆ ಮೇಕಪ್ ಮಾಡುವ ಮೂಲಕ ಗಮನಸೆಳೆದಿದ್ದರು.
ಹಿಂದೆಲ್ಲಾ ನಡೆಯುತ್ತಿದ್ದ ಯುವಕ ಮಂಡಲಗಳ, ಸಂಘ ಸಂಸ್ಥೆಗಳ, ಶಾಲಾ ವಾರ್ಷಿಕೋತ್ಸವಗಳ ತುಳು ಹಾಗೂ ಪೌರಾಣಿಕ ನಾಟಕಗಳಿಗೆ ಬಾಬು ಮಾಷ್ಟ್ರು ಅವರ ಮೇಕಪ್ ತಂಡವೇ ಪ್ರಮುಖವಾಗಿತ್ತು.
ಜಿಲ್ಲೆಯಲ್ಲಿ ನಡೆದ ಅದೆಷ್ಟೋ ನಾಟಕಗಳ ಅದೆಷ್ಟೋ ಸಾವಿರ ಕಲಾವಿದರ,ಅದೆಷ್ಟೋ ಸಾವಿರ ವಿದ್ಯಾರ್ಥಿಗಳ ಮುಖಕ್ಕೆ ಅವರು ಬಣ್ಣ ಹಚ್ಚಿದ್ದಾರೆ.
ಸಾಧು ಸ್ವಭಾವದವರಾಗಿದ್ದ ಅವರು ಅತ್ಯಂತ ಸರಳ,ಸಜ್ಜನಿಕೆಯ ವ್ಯಕ್ತಿಯಾಗಿ ‘ ಮಾಷ್ಟ್ರೆ ‘ ಎಂದು ಎಲ್ಲರಿಂದ ಪ್ರೀತಿಯಿಂದ ಕರೆಸಿಕೊಂಡಿದ್ದರು.ಅವರ ಶಿಷ್ಯ ಬಳಗ ಕೂಡಾ ದೊಡ್ಡದಿದೆ.
ಪೆರಿಂಜೆ ಶಾಲೆಯಲ್ಲಿ ಶಿಕ್ಷಕರಾಗಿ,ಕಾಶಿಪಟ್ಣ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಅವರು ಬೆಳ್ತಂಗಡಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮಾರೂರಿನ ಮಂಜುನಗರದ ‘ಭವಿಷ್ಯತ್’ ನಿವಾಸದಲ್ಲಿ ವಾಸವಾಗಿದ್ದ ಅವರು ಪತ್ನಿ ವಿಮಲಾ, ಓರ್ವ ಪುತ್ರ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

0 Comments