ಹಿಂದಿ ಭಾಷೆ ಹೃದಯಗಳನ್ನು ಬೆಸೆಯುವ ಸೇತುವೆ: ಫ್ಲೇವಿಯಾಪಾಲ್

ಹಿಂದಿ ಭಾಷೆ ಹೃದಯಗಳನ್ನು ಬೆಸೆಯುವ ಸೇತುವೆ: ಫ್ಲೇವಿಯಾ
ಪಾಲ್
ಮೂಡುಬಿದಿರೆ: ಭಾಷೆ ಮನುಷ್ಯನ ಭಾವನೆಗಳಿಗೆ ಧ್ವನಿ ನೀಡುವ ಸಾಧನ ಮಾತ್ರವಲ್ಲ; ಅದು ಹೃದಯದಿಂದ ಹೃದಯಕ್ಕೆ ಸಾಗುವ ಸೇತುವೆ. ವೈವಿಧ್ಯಮಯ ಸಂಸ್ಕೃತಿ , ಆಚಾರ-ವಿಚಾರ ಹಾಗೂ ಭಾಷೆಗಳ ನಡುವೆ ಸೌಹಾರ್ದದ ಕೊಂಡಿಯಾಗಿ ಹಿಂದಿ ಭಾಷೆ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಉಜಿರೆ ಎಸ್‌ಡಿಎಮ್
 ಕಾಲೇಜಿನ ಹಿಂದಿ. ಉಪನ್ಯಾಸಕಿ. ಪ್ಲೇವಿಯಾ ಪಾಲ್ ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಹಿಂದಿ ಉತ್ಸವ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ
ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹಿಂದಿ ಭಾಷೆ ತನ್ನದೇ ಆದ ಪ್ರಭಾವ ಮತ್ತು ಮಹತ್ವವನ್ನು ಹೊಂದಿದೆ. ಜಾಗತೀಕರಣದ ಸಂದರ್ಭದಲ್ಲಿ ಹಿಂದಿ ಭಾಷೆ ಜಗತ್ತಿನ ವಿವಿಧ ಭಾಗಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ
ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ
ಕಾರ್ಯದರ್ಶಿ ರಶ್ಮಿತಾ ಜೈನ್ ಅಂಚೆ ತಂತಿ ಮತ್ತು ಬ್ಯಾಂಕುಗಳಲ್ಲಿ ರಕ್ಷಣಾ ಸೇವೆಗಳಲ್ಲಿ ಹಿಂದಿ ಭಾಷೆ ಅನಿವಾರ್ಯ ಹಾಗೂ ಅಗತ್ಯ. ಅದು ಮನವನ್ನು ಮುಟ್ಟುವ ಭಾಷೆ ಎಂದರು.

 ಎಕ್ಸಲೆಂಟ್ ಕಾಲೇಜಿನ ಹಿಂದಿ ಉಪನ್ಯಾಸಕಿ ದಿವ್ಯಲಕ್ಷ್ಮೀ ರೈ ಅತಿಥಿ ಪರಿಚಯ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಉಪಪ್ರಾಂಶುಪಾಲ ಸುನದ್ ರಾಜ್ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಹಾಗೂ ಶುಭ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಹಿಂದಿ ಅಧ್ಯಾಪಕರಾದ ಸೌಮ್ಯ ಹಾಗೂ ರಮ್ಯ ಉಪಸ್ಥತಿರಿದ್ದರು.

ಕೀರ್ತನ್ ಕುಮಾರ್ ಸ್ವಾಗತಿಸಿದರು. ಹಿತಾರ್ಥ್ ಕಡಬ ಕಾರ್ಯಕ್ರಮ ನಿರೂಪಿಸಿದರು.  ಅನುಷಾ ವಂದಿಸಿದರು. 
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಕವ್ವಾಲಿ, ಹಿಂದಿ ಗೀತೆ, ಗಜಲ್ ಹಾಗೂ ಮನಮೋಹಕ ಹಿಂದಿ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಸಂಗೀತ, ಸಾಹಿತ್ಯ ಮತ್ತು ನೃತ್ಯದ ಸಮ್ಮಿಲನದ ಮೂಲಕ ವಿದ್ಯಾರ್ಥಿಗಳು ಹಿಂದಿ ಭಾಷೆಯ ವೈವಿಧ್ಯಮಯ ಸೌಂದರ್ಯವನ್ನು ಅನಾವರಣಗೊಳಿಸಿದರು.

Post a Comment

0 Comments

Advertisement