ಮೂಡುಬಿದಿರೆ : ಇಲ್ಲಿನ ವಿದ್ಯಾನಗರ ನಿವಾಸಿ ,ವಿಶ್ರಾಂತ ಮುಖ್ಯ ಶಿಕ್ಷಕ, ಶಾಲಾ ವಿಷಯ ಪರೀಕ್ಷಕ ಆರ್. ಮಾಧವ ಶೆಣೈ ( 91) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಇಬ್ಬರು ಪುತ್ರರು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.
ಎಂ.ಎ. ಬಿ.ಎಡ್. ಪದವೀಧರರಾದ ಮಾಧವ ಶೆಣೈ ಅವರು 1963 ರಲ್ಲಿ ಕಡಬ ರೆಂಜಲಾಡಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ ಹಂಗಳೂರು ಬಡಾನಿಡಿಯೂರು, ಕಾರ್ಕಳ ಮೈನ್ ಶಾಲೆ, ಬೆಳುವಾಯಿ ಮೈನ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಶಾಲಾ ವಿಷಯ ಪರಿವೀಕ್ಷಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮುಂದೆ ಭಡ್ತಿ ಪಡೆದು ಇರುವೈಲು ಹೊಸಬೆಟ್ಟು ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಒಟ್ಟು 33 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

0 Comments